ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ಮಾನ್ವಿಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ವಿಮಲ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟ ಅಧ್ಯಕ್ಷೆ ರಮ್ಯಾ ಅಧ್ಯಕ್ಷತೆ ವಹಿಸಿದ್ದರು. ಆರ್ಥಿಕ ಮತ್ತು ಸಾಕ್ಷರತಾ ಸಮಾಲೋಚಕಿ ಉಷಾ ಕಾಮತ್, ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಅಧಿಕಾರಿ ವಿಜಯಲಕ್ಷ್ಮಿ, ನಿವೃತ್ತ ಶಿಕ್ಷಕಿ ಮನೋರಮಾ, ವಲಯ ಮೇಲ್ವಿಚಾರಕಿ ವೀಣಾಶ್ರೀ ಹಾಗೂ ಗ್ರಂಥಪಾಲಕಿ ಮಂಜುಳಾ ಉಪಸ್ಥಿತರಿದ್ದರು.
ಒಕ್ಕೂಟದ ಪದಾಧಿಕಾರಿಗಳ ಬದಲಾವಣೆ ಮಾಡಿ ಪದಾಧಿಕಾರಿಗಳಿಗೆ ಮತ್ತು ಉತ್ತಮ ಸಂಘಕ್ಕೆ ಗೌರವಿಸಲಾಯಿತು. ಸಂಜೀವಿನಿ ಸದಸ್ಯರಿಗೆ ಹಾಗೂ ಸ್ತ್ರೀಶಕ್ತಿ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು, ತರಕಾರಿಗಳನ್ನು ಮಾರಾಟ ಮಾಡಲಾಯಿತು. ಒಕ್ಕೂಟದ ಸದಸ್ಯೆ ಅನಿತಾ ವಾರ್ಷಿಕ ವರದಿ ವಾಚಿಸಿದರು. ಪಶು ಸಖಿ ಯಶೋದಾ ಜಮಾಖರ್ಚಿನ ವೆಚ್ಚವನ್ನು ಮಂಡಿಸಿದರು.
ಕೃಷಿ ಸಖಿ ಸುಚೇತಾ ಪ್ರಾರ್ಥಿಸಿ, ಒಕ್ಕೂಟದ ಕಾರ್ಯದರ್ಶಿ ಧನಲಕ್ಷ್ಮೀ ಸ್ವಾಗತಿಸಿ, ಎಲ್‌ಸಿಆರ್‌ಪಿ ಪುಷ್ಪ ವಂದಿಸಿ, ಎಂಬಿಕೆ ಚಂದ್ರವತಿ ಕಾರ್ಯಕ್ರಮ ನಿರೂಪಿಸಿದರು.