April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಮಚ್ಚಿನ: ಅನುಮತಿ ಇಲ್ಲದೆ ಮರ ಕಡಿದು ಮೂರು ವಿದ್ಯುತ್ ಕಂಬಕ್ಕೆ ಹಾನಿ; ಮೆಸ್ಕಾಂ ಸಹಾಯವಾಣಿಗೆ ದೂರು ನೀಡಿದ್ದಕ್ಕೆ ದಂಪತಿಗಳಿಗೆ ಹಲ್ಲೆ

ಬೆಳ್ತಂಗಡಿ : ಅನುಮತಿ ಇಲ್ಲದೆ ಮರ ಕಡಿದ ಪರಿಣಾಮ ವಿದ್ಯುತ್ ವೈಯರ್ ಗೆ ಬಿದ್ದು ಮೂರು ಕಂಬ ಹಾನಿಯಾಗಿದೆ .ಇದರಿಂದ ಪಕ್ಕದ ಮನೆಯ ನಿವಾಸಿ ಮನೆಯ ಮೇಲೂ ವಿದ್ಯುತ್ ವೈಯರ್ ಬಿದ್ದಿತ್ತು. ಇದಕ್ಕೆ ಮೆಸ್ಕಾಂ ಸಹಾಯವಾಣಿಗೆ ದೂರು ನೀಡಿದ್ದಕ್ಕೆ ಮೂವರು ಸೇರಿ ದಂಪತಿಗಳಿಗೆ ಹಲ್ಲೆ ಮಾಡಿದ್ದು, ದಂಪತಿಗಳು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನೆತ್ತಾರ ಬಳಿಯ ಹಂಡಾಲು ನಿವಾಸಿ ಅಬುಬಕ್ಕರ್ ಮನೆಯ ಅಂಗಳದಲ್ಲಿದ್ದ ಹಳೆಯ ಮರವನ್ನು ಕಡಿಯಲು ಮೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡಿದ್ದರು ಇದಕ್ಕೆ ಮೆಸ್ಕಾಂ ಅಧಿಕಾರಿಗಳು ಮರ ಕಡಿಯಲು ಅನುಮತಿ ಕೊಟ್ಟಿರಲಿಲ್ಲ ಆದ್ರೆ ಅಬುಬಕ್ಕರ್ ಏಕಾಏಕಿ ಜನ ಕರೆಸಿ ಮಾ.9 ರಂದು ಮಧ್ಯಾಹ್ನ ಮರ ಕಡಿಸಿದ್ದಾರೆ. ಇದರಿಂದ ವಿದ್ಯುತ್ ವೈಯರ್ ಗೆ ಬಿದ್ದು ಮೂರು ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅಶ್ರಫ್ ಅವರ ಮನೆಯ ಮೇಲೂ ಕೂಡ ವೈಯರ್ ಬಿದ್ದು ವಿದ್ಯುತ್ ಸಂಪರ್ಕ ಕಟ್ ಅಗಿದೆ. ಸಂಜೆ ಸುಮಾರು 3 ಗಂಟೆಗೆ ಅಶ್ರಫ್ ಮೆಸ್ಕಾಂ ಸಹಾಯವಾಣಿ 1912 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದರಿಂದ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ದೂರು ಪಡೆದುಕೊಂಡು ಹೋಗಿದ್ದರು.

ಘಟನೆ ಬಳಿಕ ಪಕ್ಕದ ಮನೆಯ ಹನೀಫ್ ಮತ್ತು ಮಕ್ಕಳಾದ ಇರ್ಫಾನ್, ಇರ್ಷಾದ್ ಸೇರಿ ಅಶ್ರಫ್ ಮನೆಗೆ ಬಂದು ನೀನು ದೂರು ನೀಡುತ್ತಿಯಾ ಎಂದು ಹೇಳಿ ಹಲ್ಲೆ ಮಾಡಿದ್ದಾರೆ. ಸಹಾಯಕ್ಕೆ ಬಂದ ಪತ್ನಿ ಅಸ್ಮಾ ಕಾಲಿಗೆ ಹಲ್ಲೆಯಿಂದ ಗಾಯವಾಗಿದೆ.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನೆತ್ತಾರ ಬಳಿಯ ಹಂಡಾಲು ನಿವಾಸಿ ಅಶ್ರಫ್ (45) ಮತ್ತು ಪತ್ನಿ ಅಸ್ಮಾ(38). ಹಲ್ಲೆಗೊಳಾದ ದಂಪತಿಗಳು. ಸದ್ಯ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಅಶ್ರಫ್ ದೂರು ನೀಡಿದ್ದಾರೆ.

ವಿದ್ಯುತ್ ಕಂಬದ ಬಗ್ಗೆ ಮಚ್ಚಿನ ಮೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಅನುಮತಿ ಇಲ್ಲದೆ ಮರವನ್ನು ಕಡಿದಿದ್ದಾರೆ ಇದಕ್ಕೆ ಮೆಸ್ಕಾಂ ಸಹಾಯವಾಣಿಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ಹೋಗಿ ವರದಿ ಮಾಡಿಕೊಂಡಿದ್ದು. ಅಬುಬಕ್ಕರ್ ಅವರಿಗೆ ಮೂರು ಕಂಬಕ್ಕೆ ಹಾನಿ ಮಾಡಿದ್ದಕ್ಕೆ ಸುಮಾರು 30 ರಿಂದ 35 ಸಾವಿರ ದಂಡ ಹಾಕಲಾಗುತ್ತೆ ಎಂದಿದ್ದಾರೆ.

Related posts

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಹತ್ಯಡ್ಕ: ಕೊಡಂಗೆ ನಿವಾಸಿ ಹರಿಹರ ಹೆಬ್ಬಾರ್ ಗೋಖಲೆ ನಿಧನ

Suddi Udaya

ಹೊಂಬೆಳಕು ಕಾರ್ಯಕ್ರಮದಲ್ಲಿ ಉಜಿರೆ ಪಂ.ಅ.ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ರವರಿಗೆ ಸನ್ಮಾನ

Suddi Udaya

2024 ಫೆಬ್ರವರಿ ತಿಂಗಳಲ್ಲಿ ವೇಣೂರು ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Suddi Udaya

ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಲನಾ ಸಮಿತಿಯಿಂದ “ಮನಸು “ಅಂತರಾಳದ ಅವಲೋಕನ

Suddi Udaya

ವೇಣೂರು ದೇವಾಡಿಗರ ಸೇವಾ ವೇದಿಕೆಯ ವತಿಯಿಂದ ಸಾಧಕರಿಗೆ ಸನ್ಮಾನ , ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ವಿತರಣೆ

Suddi Udaya
error: Content is protected !!