ಬೆಳ್ತಂಗಡಿ:ಮಿತ್ತಬಾಗಿಲು ಗ್ರಾಮದ ಗ್ರಾ.ಪಂ ಸದಸ್ಯೆ ಮೋಹಿನಿರವರ ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದೆ ಕಿರಿದಾದ ಕಾಲುದಾರಿ ಮತ್ತು ಹೊಳೆಯನ್ನು ದಾಟಿ ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ಕಲ್ಲು ಮತ್ತು ಮರಳು ಸಾಗಿಸಲು ಕಷ್ಟಪಡುವಂತ ಪರಿಸ್ಥಿತಿ ಎದುರಾಗಿತ್ತು.
ಶೌರ್ಯ ವಿಪತ್ತು ನಿರ್ವಹಣಾದ ಸದಸ್ಯರ ಸಹಾಯವನ್ನು ಮೋಹಿನಿಯವರು ಕೇಳಿದ್ದು, ಮನವಿಗೆ ಸ್ಪಂದಿಸಿದ ವಿಪತ್ತು ನಿರ್ವಹಣಾದ ಎಲ್ಲಾ ಸದಸ್ಯರು ಸೇರಿ ಕಲ್ಲು ಮತ್ತು ಮರಳು ಅವರ ಮನೆ ತನಕ ಹೊತ್ತುಕೊಂಡು ಹೋಗಿ ಹಾಕಿ ಮನೆಯವರ ಮೆಚ್ಚುಗೆಗೆ ಪಾತ್ರರಾದರು. ಕಷ್ಟ ಕಾಲದಲ್ಲಿ ಸ್ಪಂದಿಸುವ ಶೌರ್ಯ ಘಟಕದ ಎಲ್ಲಾ ಸದಸ್ಯರನ್ನು ಊರವರು ಶ್ಲಾಘಿಸಿದರು.