ಬೆಳ್ತಂಗಡಿ : ಪಿ. ಎಂ. ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪಿ.ಎಂ.ಸಿ ಯೋಜನೆಯಾ ಮಹತ್ವಪೂರ್ಣ ಕಾರ್ಯಕ್ರಮಗಳಲ್ಲಿ ಒಂದಾದ ಸ್ವಚ್ಛತಾ ಪಕ್ವಾಡದ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಾಗಾರ ಶಾಲೆಯ ವತಿಯಿಂದ ನಡೆಯಿತು.

ಜಾಥಾದ ಉದ್ಘಾಟನೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಇದರ ಸಂಪನ್ಮೂಲ ವ್ಯಕ್ತಿಗಳಾದ ಮೋಹನ್ ಕುಮಾರ್ ನೆರವೇರಿಸಿ ಶುಭ ಹಾರೈಸಿದರು. ವಿವಿಧ ಘೋಷಣೆಗಳು, ಘೋಷ ವಾಕ್ಯಗಳು , ವರ್ಣರಂಜಿತ ಸ್ವಚ್ಛತಾ ಮಾಹಿತಿ ಟೋಪಿ ಗಳನ್ನ ಧರಿಸಿದ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿ ಶಾಲೆಯಿಂದ ಮೆರವಣಿಗೆ ಹೊರಟು ಅಂಗಡಿ ಮಳಿಗೆ, ನಗರ ಪಂಚಾಯತ್, ತಾಲೂಕು ಕಚೇರಿ ಮೊದಲಾದ ಸ್ಥಳಗಳಿಗೆ ತಮ್ಮ ಮಾಹಿತಿಯ ಮತ್ತು ಸ್ವಚ್ಛತಾ ಜಾಗೃತಿಯ ಕರಪತ್ರಗಳನ್ನ ಹಂಚಿದರು.

ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ರೇಣುಕಾ ರವರು ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಇರಬೇಕಾದ ಅರಿವಿನ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಈ ವೇಳೆಯಲ್ಲಿ ಶಾಲಾ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸಿ ಸ್ವಚ್ಛತಾ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ 8ನೇ ತರಗತಿ ವಿದ್ಯಾರ್ಥಿ ನಿರಂಜನ್ ಅನ್ನು ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ದೈಹಿಕ ಶಿಸ್ತಿನ ಮಹತ್ವವನ್ನು ತಿಳಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚರಣ್ ಕುಮಾರ್, ಮುಖ್ಯ ಶಿಕ್ಷಕರಾದ ಸೂರ್ಯನಾರಾಯಣ ಪುತ್ತೂರಾಯರು, ಹಿರಿಯ ಶಿಕ್ಷಕ ದಿನಕರ್ ನಾಯಕ್, ಸಂಪನ್ಮೂಲ ವ್ಯಕ್ತಿಯಾದ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ರೇಣುಕಾ ಉಪಸ್ಥಿತರಿದ್ದರು.

ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದ ನೋಡಲ್ ಶಿಕ್ಷಕಿಯಾದ ಶ್ರೀಮತಿ ಸವಿತಾ ಕಾರ್ಯಕ್ರಮವನ್ನು ಆಯೋಜಿಸಿ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ ಶಿಕ್ಷಕಿ ಚಿತ್ರ ಸ್ವಾಗತಿಸಿ, ಶ್ರೀಮತಿ ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಇದರೊಂದಿಗೆ ಸ್ವಚ್ಛತಾ ಕಾರ್ಯಕ್ರಮದ ಪ್ರಯುಕ್ತ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.