
ಕೊಯ್ಯೂರು : ಕೊಯ್ಯೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ದುರಸ್ತಿ ಗಾಗಿ 50 ಸಾವಿರ ದೇಣಿಗೆಯನ್ನು ಮಾ.12 ರಂದು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ವಲಯ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಅವರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಗೌಡರಿಗೆ ಹಸ್ತಾಂತರ ಮಾಡಿದರು.
ಯೋಜನಾ ಕೃಷಿ ಅಧಿಕಾರಿ ರಾಮ್ ಕುಮಾರ್, ಕೊಯ್ಯೂರು ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ ಬೆರ್ಕೆ,ಉಪಾಧ್ಯಕ್ಷ ರಾಮಣ್ಣ ಗೌಡ, ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕ ದಾಮೋಧರ ಗೌಡ ಬೆರ್ಕೆ,ಶಾಲಾ ಪೋಷಕಪಾದ ಶಿವಪ್ಪ ಗೌಡ, ಓಬಯ್ಯ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಜಾರಪ್ಪ ಗೌಡ ಬೇರ್ಕೆ,ಮುಖ್ಯ ಶಿಕ್ಷಕಿ ಜಯಶ್ರೀ, ಸಹ ಶಿಕ್ಷಕರಾದ ಸೌಮ್ಯ, ದೀಪಿಕಾ ಟಿ,ಸೇವಾ ಪ್ರತಿ ಕುಸುಮಾವತಿ,ಮೇಲುಸ್ತುವಾರಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಮತ್ತಿತರ ರಿದ್ದರು.