23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಾ.15-19: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ

ಕೊಯ್ಯೂರು: ಇಲ್ಲಿಯ ಇತಿಹಾಸಪ್ರಸಿದ್ದ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆಯು ಶ್ರೀ ವೇದಮೂರ್ತಿ ನಂದಕುಮಾರ ತಂತ್ರಿ ರವರ ನೇತೃತ್ವದಲ್ಲಿ ಮಾ.15 ರಿಂದ ಮಾ.19 ರವರೆಗೆ ವಿದ್ಯುಕ್ತವಾಗಿ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಬಿ. ಹರಿಶ್ಚಂದ್ರ ಬಲ್ಲಾಳ್ ಕೊಯ್ಯೂರುಗುತ್ತು ತಿಳಿಸಿದ್ದಾರೆ.

ಮಾ.15ರಂದು ಬೆಳಿಗ್ಗೆ ವೈದಿಕ ವಿಧಿವಿಧಾನಗಳು, ರಾತ್ರಿ ಉತ್ಸವ, ಮಹಾಪೂಜೆ, ಬಲಿ. ಮಾ.16ರಂದು ಬೆಳಿಗ್ಗೆ ಉತ್ಸವ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಉತ್ಸವ, ಪಡಿಯಕ್ಕಿ, ಮಹಾಪೂಜೆ, ಬಲಿ. ಮಾ.17ರಂದು ಬೆಳಿಗ್ಗೆ ದರ್ಶನ ಬಲಿ, ಕಲಶಾಭಿಷೇಕ, ಮಹಾಪೂಜೆ, ಚಂಡಿಕಾ ಹೋಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಕೊಟ್ಟಿಗೆ ಕೆಲಸ, ಮಹಾರಥೋತ್ಸವ ಮಹಾಪೂಜೆ, ಭೂತಬಲಿ, ಕವಾಟ ಬಂಧನ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ನಂದನ ಮಾಲೆಂಕಿ ರವರಿಂದ ಸಂಗೀತ ಕಚೇರಿ ನಡೆಯಲಿದೆ. ಕೊಯ್ಯೂರು ಸುಂದರ ದೇವಾಡಿಗ ಮತ್ತು ಬಳಗದಿಂದ ಚೆಂಡೆ ವಾದನ, ಉಮಾನಾಥ ದೇವಾಡಿಗ ಅಶ್ವಥಪುರ ಮತ್ತು ಬಳಗದಿಂದ ನಾದಸ್ವರ ವಾದನ ನಡೆಯಲಿದೆ.

ಮಾ.18ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಅಭಿಷೇಕ, ಪ್ರಸನ್ನಪೂಜೆ, ಮೂಲಸ್ಥಾನ ಗುಂಡದಿಂದ ಭಂಡಾರದ ಆಗಮನ, ಮಹಾಪೂಜೆ ಹಾಗೂ ಶ್ರೀಮತಿ ಸುಕನ್ಯಾ ದಿನೇಶ್ ಮತ್ತು ಬಳಗದಿಂದ ಸಂಗೀತ ಕಛೇರಿ, ಶ್ರೀ ಪಂಚದುರ್ಗಾ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ, ಕೊಲ್ಯೂರು ಭಾಸ್ಕರ ಮತ್ತು ಬಳಗದಿಂದ ವಿಶೇಷ ಚೆಂಡೆ ಸೇವೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಬೆಳ್ತಂಗಡಿ ‘ಶೆಟ್ಟಿ ಆರ್ಟ್ಸ್’ ಗಿರಿಧರ ಶೆಟ್ಟಿ ಬಳಗದವರಿಂದ ವಿನೂತನ ಶೈಲಿಯ ನೃತ್ಯ, ಶ್ರೀ ಪಂಚದುರ್ಗಾಪರಮೇಶ್ವರಿ ಗೆಳೆಯರ ಬಳಗ ಕೊಯ್ಯೂರು ಇವರಿಂದ ಚೇತನ್ ವರ್ಕಾಡಿ ವಿರಚಿತ “ಏರಾದುಪ್ಪು” ತುಳು ಹಾಸ್ಯ ಸಾಂಸಾರಿಕ ನಾಟಕ, ರಾತ್ರಿ 9ರಿಂದ ಧರ್ಮದೈವಗಳ ನೇಮೋತ್ಸವ, ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೋತ್ಸವ, ಮಹಾಪೂಜೆ ನಡೆಯಲಿದೆ.ಮಾ.19ರಂದು ಬೆಳಿಗ್ಗೆ ವೈದಿಕ ವಿಧಿವಿಧಾನಗಳು ಜರುಗಲಿದೆ.

ಮಾ.25 ರಂದು ಜಾತ್ರಾ ಪ್ರಯುಕ್ತ ಸಂಜೆ 6:30ರಿಂದ ಬಪ್ಪನಾಡು ಮೇಳದವರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಲಿದೆ.

Related posts

ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ; ಸಾವಿರಾರು ಮಂದಿ ಭಾಗಿ

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಮಡಂತ್ಯಾರು: ವರ್ತಕ ಬಂಧು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

Suddi Udaya

ಪಟ್ರಮೆ ಅನಾರು ಸ.ಉ.ಹಿ.ಪ್ರಾ. ಶಾಲೆ: ಶಾಲಾ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ವೇಣೂರು: ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಜಗತ್ಪಾಲ ಮುದ್ಯ ಕತ್ತೋಡಿ ನಿಧನ

Suddi Udaya
error: Content is protected !!