30.2 C
ಪುತ್ತೂರು, ಬೆಳ್ತಂಗಡಿ
May 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಹಾಗೂ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಹಿಳಾ ಶಕ್ತಿ ದೇಶದ ಶಕ್ತಿ, ಮಹಿಳೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಬೆಳೆಸಿ ಮುಂದೆ ಬಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, ಎಂದು ದಿನಾಂಕ 12.03.2025 ರಂದು ಸಾಂತೋಮ್ ಟವರ್ ಬೆಳ್ತಂಗಡಿಯಲ್ಲಿ ಆಯೋಜಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಅಧ್ಯಕ್ಷರು ಆಗಿರುವ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಇವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ವಲ್ಸಮ್ಮ ಎ.ಜೆ ಇವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಅನ್ನಮ್ಮ ಡೆಪ್ಯೂಟಿ ಕಮಾಂಡಂಟ್ ಸಿ.ಆರ್. ಪಿ .ಎಫ್ ಮಣಿಪುರ ಹಾಗೂ ಶ್ರೀಮತಿ ವಲ್ಸಮ್ಮ ಏ.ಜೆ ಇವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಅನ್ನಮ್ಮ ಡೆಪ್ಯೂಟಿ ಕಮಾಂಡೆಂಟ್ ಇವರು ತಮ್ಮ ಸಾಧನೆ ಹಾದಿಯನ್ನು ಪ್ರೇರಣೆಯಾಗಿ ಮಹಿಳೆಯರಿಗೆ ಉದಾಹರಣೆಯ ಮೂಲಕ ತಿಳಿಸಿ ಶುಭಹಾರೈಸಿದರು.

ಡಾ. ಸಂಜಾತ್ ತಾಲೂಕು ಆರೋಗ್ಯ ಅಧಿಕಾರಿ ಇವರು ತರಕಾರಿ ಕೈ ತೋಟ ರಚನಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ಹಾಗೂ ಸರಕಾರಿ ಇಲಾಖೆಯಿಂದ ಸಿಗುವ ಸೌಲಭ್ಯದ ಕುರಿತು ತಿಳಿಸಿದರು. ಶ್ರೀಮತಿ ತಾರಕೇಶ್ವರಿ ಕ್ಷೇತ್ರ ಶಿಕ್ಷಣ ಅಧಿಕಾರಿ ಬೆಳ್ತಂಗಡಿ ಇವರು ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ಕುಮಾರಿ ಸ್ನೇಹ ಎಲಿಜಬೆತ್ ಇವರನ್ನು ಸನ್ಮಾನಿಸಿ ಮಹಿಳೆ ಮತ್ತು ಶಿಕ್ಷಣದ ಬಗ್ಗೆ ತಿಳಿಸಿ ಶುಭ ಹಾರೈಸಿದರು.

ಶ್ರೀಮತಿ ಮಂಜುಳಾಜಾನ್ ಅಧ್ಯಕ್ಷರು ಮಾನಿನಿ ರಾಜ್ಯ ಮಹಿಳಾ ಒಕ್ಕೂಟ ಇವರು ಒಗ್ಗಟ್ಟಿನ ಮೂಲಕ ಸಮಾಜದ ಅಭಿವೃದ್ಧಿ ಸಾಧಿಸಲು ಕರೆನೀಡಿದರು.

ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಇದರ ಸದಸ್ಯರು ಅರಿವಿನ ಹಾಡಿನಮೂಲಕ ಜಾಗೃತಿ ಮೂಡಿಸಿದರು. ಡಿ .ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಗುರಿ ಉದ್ದೇಶದ ಕುರಿತು ವಿವರಿಸಿದರು.
ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ ಇದರ ಸದಸ್ಯರು ಸ್ವಾಗತ ನೃತ್ಯ ಮಾಡಿದರು. ಸ್ನೇಹ ಜ್ಯೋತಿ ಒಕ್ಕೂಟ ಇದರ ಸದಸ್ಯರು ಪ್ರಾರ್ಥನಾ ಹಾಡಿದರು.
ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಡೈಸಿ ಜೋಯ್ ಎಲ್ಲರನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶ್ರೀಮತಿ ಉಷಾ ಎಲ್ಲರನ್ನು ವಂದಿಸಿದರು.

ಸದಸ್ಯರುಗಳಾದ ಶ್ರಿಮತಿ ಜಿನ್ಸಿ ರಾಜೇಶ್, ಶ್ರಿಮತಿ ರೆಬೇಕಾ ಕಾರ್ಯಕ್ರಮವನ್ನು ನಿರೂಪಿಸಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಒಟ್ಟು 325 ಮಂದಿ ವಿವಿಧ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ.

Related posts

ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮೂಲಕ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ಕುರಿತು ಮಾಹಿತಿ ಶಿಬಿರ

Suddi Udaya

ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ ಬಂದಾರಿನ ಚಂದ್ರಹಾಸ ಕುಂಬಾರ ಆಯ್ಕೆ

Suddi Udaya

ಉಜಿರೆ : ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರು ಕಳವು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಮಂಗಳೂರು ಕೆನರಾ ಕೈಗಾರಿಕಾ ಸಂಘಕ್ಕೆ ನಿರ್ದೇಶಕರಾಗಿ ಪಿ.ಹೆಚ್ ಆನಂದ ಗೌಡ ನೆರಿಯ ಆಯ್ಕೆ

Suddi Udaya

ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೆಳ್ತಂಗಡಿ ಮುರ ನಿವಾಸಿ ಬೈಕ್ ಸವಾರ ಗಂಭೀರ, ಬೈಕ್ ನಲ್ಲಿದ್ದ ಪುಟ್ಟ ಮಗು ಸ್ಥಳದಲ್ಲೇ ಮೃತ್ಯು

Suddi Udaya

ಶಟ್ಲ್ ಬ್ಯಾಡ್ಮಿಂಟನ್ ಶಿವ ಮತ್ತು ಮುನೀರ್ ಮಾಲೀಕತ್ವದ ಎಸ್ಎಂ ಸ್ಮಶರ್ಸ್ ತಂಡ ವಿನ್ನರ್

Suddi Udaya
error: Content is protected !!