27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮರೋಡಿ: ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಬೃಹತ್‌ ಗಾತ್ರದ ಮರ, ಪ್ರಾಣಪಾಯದಿಂದ ಪಾರಾದ ಮನೆಯವರು: ಮನೆ ಸಂಪೂರ್ಣ ಹಾನಿ, ಲಕ್ಷಾಂತರ ರೂ. ನಷ್ಟ

ಮರೋಡಿ: ನಿನ್ನೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ ಬೃಹತ್‌ ಗಾತ್ರದ ಮರವೊಂದು ಮನೆ ಮೇಲೆ ಬಿದ್ದು ಮನೆಗೆ ಸಂಪೂರ್ಣ ಹಾನಿಯಾದ ಘಟನೆ ಮರೋಡಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ಸಮಯಕ್ಕೆ ತಾಲೂಕಿನಾದ್ಯಂತ ಗಾಳಿ ಮಳೆಯಾಗಿದೆ. ಮರೋಡಿಯಲ್ಲಿಯೂ ಮಳೆಯ ಪ್ರಮಾಣ ಜೋರಾಗಿತ್ತು. ಸಂಜೆ 6.30ಕ್ಕೆ ಸುರಿದ ಜೋರಾದ ಮಳೆಗೆ ಬೃಹತ್‌ ಗಾತ್ರದ ಮರ ಬುಡ ಸಮೇತ ಸಂತೋಷ್ ದೇವಾಡಿಗರವರ ಮನೆಯ ಮೇಲೆ ಉರುಳಿ ಬಿದ್ದಿದೆ. ಮನೆಯಲ್ಲಿ ಸಂತೋಷ ದೇವಾಡಿಗ ಅವರ ತಾಯಿ ಲಲಿತಾ, ತಮ್ಮ ಸಂದೀಪ್ ದೇವಾಡಿಗ, ತಮ್ಮನ ಪತ್ನಿ ರಜನಿ, ಸಣ್ಣ ಪ್ರಾಯದ ಮಗು ಮನೆಯೊಳಗೆ ಇದ್ದರು. ಜೋರಾದ ಶಬ್ದ ಬಂದಾಗ ಎಲ್ಲರೂ ಮನೆಯ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯ ಹಂಚು, ಶೀಟ್, ಅಡುಗೆ ಪಾತ್ರೆ, ಟಿವಿ, ಕಿಟಕಿ, ದಾರಂದ, ವಿದ್ಯುತ್ ಉಪಕರಣಗಳು ಎಲ್ಲವೂ ಹಾನಿಗೊಳಗಾಗಿದೆ.ಲಕ್ಷಾಂತರ ರೂ ನಷ್ಟ ಸಂಭವಿಸಬಹುದೆಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ತಕ್ಷಣ ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್,ಕಂದಾಯ ಇಲಾಖಾ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಸ್ಥಳೀಯರಾದ ಸೂರಾಜ್ ಅವರು ಸುದ್ದಿ ಉದಯಕ್ಕೆ ಮಾಹಿತಿ ನೀಡಿದ್ದಾರೆ.

Related posts

ಅಳದಂಗಡಿ ಅರಮನೆಗೆ ಭೇಟಿ ನೀಡಿ ಅರಸರಿಂದ ಆಶೀರ್ವಾದ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಸೆ.15: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಪಿಲ್ಯದ ಧನುಶ್ರೀ ಎಸ್. ಕುಲಾಲ್ ಪ್ರಥಮ

Suddi Udaya

ಉಜಿರೆ: ನಾಪತ್ತೆಯಾಗಿದ್ದ ಕ್ರೀಡಾ ವಸತಿ ನಿಲಯದ ಪಿಯುಸಿ ವಿದ್ಯಾರ್ಥಿನಿ ಹೈದರಾಬಾದ್ ನಲ್ಲಿ ಪತ್ತೆ

Suddi Udaya

ಉಜಿರೆ: ಅರಣ್ಯ ಇಲಾಖೆ ಹಾಗೂ ಎಸ್.ವೈ.ಎಸ್ ಉಜಿರೆ ಯೂನಿಟ್ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ

Suddi Udaya

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

Suddi Udaya
error: Content is protected !!