ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯದ ಮೀಯರು ಕಾರ್ಯಕ್ಷೇತ್ರದಲ್ಲಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳದ ಪೂಜ್ಯರು ಕೊಡಮಾಡಿದ ವೀಲ್ ಚೆಯರನ್ನು ನಂದಾದೀಪ ತಂಡದ ಶ್ಯಾಮಲಾ ಅವರ ಅತ್ತೆಯಾದ ಬೋಮ್ಮಿ ಇವರಿಗೆ ಯೋಜನಾಧಿಕಾರಿಗಳಾದ ಸುರೇಂದ್ರ ಹಾಗೂ ಒಕ್ಕೂಟದ ಅಧ್ಯಕ್ಷರಾದ ಅಪೂರ್ವ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸಂಜೀವ್ , ನಿತಿನ್, ಗೀತಾ, ನವೀನ್, ಹಾಗೂ ಜನಜಾಗ್ರತಿ ಸದಸ್ಯರಾದ ಬಾಬು ಆಚಾರ್ಯ, ಹಾಗೂ ಅಶೋಕ್ ಟ್ರೇಡರ್ಸ್ ಮಾಲೀಕರಾದ ಅಶೋಕ್ ಹಾಗೂ ಕ್ರಷಿ ಅಧಿಕಾರಿಯಾದ ರಾಮ್ ಕುಮಾರ್ ಹಾಗೂ ನಂದ ದೀಪ ತಂಡದ ಸದಸ್ಯರು, ಸೇವಾಪ್ರತಿನಿಧಿ ಚೈತ್ರರವರು ಉಪಸ್ಥಿತರಿದ್ದರು