ಬೆಳ್ತಂಗಡಿ: ಸಾಮಾಜಿಕ ಸೇವಾ ಕಾರ್ಯ ಹಾಗೂ ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ರಾಜ್ಯ ಪ್ರಶಸ್ತಿ -2022 ಪುರಸ್ಕೃತ ಕನ್ಯಾಡಿಯ ಸೇವಾ ಭಾರತಿ ಸಂಸ್ಥೆಯ 20ನೇ ವರ್ಷದ ಸಂಭ್ರಮ 2023-24 ಹಾಗೂ ರಕ್ತದಾನ ಶಿಬಿರ ಹಾಗೂ ಸಾಧನ ಸಲಕರಣೆಗಳ ವಿತರಣೆ ಸಾಧಕರಿಗೆ ಗೌರವ ಸಮರ್ಪಣೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ ಕಾರ್ಯಕ್ರಮವು ಮಾ.16 ರಂದು ಬೆಳ್ಳಿಗೆ 10.30ಕ್ಕೆ ಸೌತಡ್ಕ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚತನ ಕೇಂದ್ರದಲ್ಲಿ ನಡೆಯಲಿದೆ ಎಂದು ಸೇವಾ ಧಾಮ ದ ಸಂಸ್ಥಾಪಕರು, ಖಜಾಂಚಿ ಆಗಿರುವ ಕೆ. ವಿನಾಯಕ ರಾವ್ ತಿಳಿಸಿದ್ದಾರೆ.
ಬೆಳಿಗ್ಗೆ 10ಕ್ಕೆ ಸೇವಾಭಾರತಿ (ರಿ.), ಬೆಳ್ತಂಗಡಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ಸಹಕಾರದಲ್ಲಿ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ, ವೀರಕೇಸರಿ ಅನಾರು ಪಟ್ರಮೆಕೇಸರಿ ಗೆಳೆಯರ ಬಳಗ ಕೊಕ್ಕಡ ಹವ್ಯಕ ವಲಯ, ಉಜಿರೆ ಇವುಗಳ ಸಹಭಾಗಿತ್ವದಲ್ಲಿ 100ನೇ ಬೃಹತ್ ರಕ್ತದಾನ ಶಿಬಿರವು ನಡೆಯಲಿದ್ದು ಕೊಕ್ಕಡ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಉದ್ಘಾಟನೆಯನ್ನು ನೆರವೇರಿಸಲಿರುವರು.
ಮುಖ್ಯ ಅತಿಥಿಗಳಾಗಿ ಉಜಿರೆ ಹವ್ಯಕ ವಲಯ ಉಪಾಧ್ಯಕ್ಷ ಶಿವರಾಮ ಭಟ್, ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕಿಶೋರ್ ಪೊಯ್ಯಾಳೆ, ಪಟ್ರಮೆ ವೀರಕೇಸರಿ ಅಧ್ಯಕ್ಷ ಮೋಹನ್ ಅಶ್ವತ್ತಡಿ, ಕೊಕ್ಕಡ ಕೇಸರಿ ಗೆಳೆಯರ ಬಳಗದ ಅಧ್ಯಕ್ಷ ಶರತ್ ಕೊಕ್ಕಡ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಪ್ರವೀಣ್ ಕುಮಾರ್ ಉಪಸ್ಥಿತರಿರುವರು. 20ನೇ ವಾರ್ಷಿಕ ಸಂಭ್ರಮದ ಉದ್ಘಾಟನೆಯನ್ನು ಉಡುಪಿ ರಾ.ಸ್ವ. ಸಂಘದ ಜೇಷ್ಠ ಪ್ರಚಾರಕ ದಾ.ಮ. ರವೀಂದ್ರ ರವರು ನೆರವೇರಿಸಲಿದ್ದಾರೆ.
ಕನ್ಯಾಡಿ ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಗೌರವ ಅತಿಥಿಗಳಾಗಿ ಸಮಾಜ ಸೇವಕ ಕಿರಣ್ ಚಂದ್ರ ಡಿ, ಪುಷ್ಪಗಿರಿ, ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಬಿ. ಜೈನ್, ಉಡುಪಿ ಭಾರತ ವಿಕಾಸ ಪರಿಷತ್ ಭಾರ್ಗವ ಶಾಖೆಯ ಸಂಯೋಜಕ ವಸಂತ ಭಟ್, ಕೃಷಿಕ ಅರುಣ ಜೆ.ಎನ್ ರೆಬೆಲ್ಲೊ, ಉಡುಪಿ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ ಗುರುಪ್ರಕಾಶ್ ಶೆಟ್ಟಿ, ಕೊಕ್ಕಡ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷರ ಕೆ. ಕೃಷ್ಣ ಭಟ್ ಭಾಗವಹಿಸಲಿರುವರು.ಪುತ್ತೂರು ದಿ ವೆಬ್ ಪೀಪಲ್ ಸಂಸ್ಥಾಪಕ ಆದಿತ್ಯ ಕಲ್ಲೂರಾಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಹಾಗೂ ಜಯರಾಜ ಸಾಲಿಯಾನ್, ಕಾನರ್ಪ ಹಾಗೂ ಪೃಥ್ವಿಶ್ ಧರ್ಮಸ್ಥಳ ನೂತನ ಟ್ರಸ್ಟಿಗಳಾಗಿ ಸೇರ್ಪಡೆಗೊಳ್ಳಲಿದ್ದಾರೆ.
ಸೇವಾಭಾರತಿ 2004ರಲ್ಲಿ ಕನ್ಯಾಡಿ ವಿನಾಯಕ ರಾವ್ ಸ್ಥಾಪಿಸಿದ ಸರಕಾರೇತರ ಸಂಸ್ಥೆಯಾಗಿದ್ದು 18 ವರ್ಷಗಳಿಂದ ಆರೋಗ್ಯ, ಮಹಿಳಾ ಸಶಕ್ತಿಕರಣ, ಸ್ವ-ಉದ್ಯೋಗದ ಸೇವಾಕಾರ್ಯ ಹಾಗೂ ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸುಮಾರು 500 ಬೆನ್ನುಹುರಿ ಮುರಿತಾಕ್ಕೊಳಗಾದವರನ್ನು ಗುರುತಿಸಿ 150 ಮಂದಿಗೆ ಪುನಶ್ವೇತನವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಉತ್ತರಕನ್ನಡ, ದ.ಕ., ಚಿಕ್ಕಮಗಳೂರು, ಕಾಸರಗೋಡು, ಕೊಡಗು, ಉಡುಪಿ ಭಾಗಗಳಲ್ಲಿರುವ ಇನ್ನೂ ಅನೇಕ ಬೆನ್ನುಮೂಳೆ ಮುರಿತಕ್ಕೊಳಗಾದವರನ್ನು ಗುರುತಿಸುವ ಕಾರ್ಯ ಸಂಸ್ಥೆಯಿಂದ ನಡೆಯುತ್ತಿದೆ. ಸೇವಾಭಾರತಿಯ ಘಟಕವಾಗಿ 2018ರಿಂದ ಬೆನ್ನುಹುರಿ ಮುರಿತಕ್ಕೊಳಗಾದ ದಿವ್ಯಾಂಗರಿಗಾಗಿ ಸೇವಾಧಾಮ ಹೆಸರಿನ ಪುನರಚೇತನ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಟ್ರಸ್ಟ್‌ನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.