September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸುವರ್ಣ ವಿ. ವರಕಬೆ ಅವರಿಗೆ ಓಡೀಲುವಿನಲ್ಲಿ ಪೌರ ಸನ್ಮಾನ ಹಾಗೂ ವೀರ ಸಿಂಧೂರ ಪ್ರಶಸ್ತಿ ಪ್ರದಾನ

ಪಡoಗಡಿ :ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಬೆಳ್ತಂಗಡಿ ಘಟಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಓಡೀಲು ಇದರ ಆಶ್ರಯದಲ್ಲಿ ಭಾರತೀಯ ಭೂಸೇನೆಯಲ್ಲಿ ಸುದೀರ್ಘ 37 ವರ್ಷ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಹೆಮ್ಮೆಯ ಯೋಧ ಸುವರ್ಣ ವಿ ವರಕಬೆ ಇವರಿಗೆ ಪೌರ ಸನ್ಮಾನ ಹಾಗೂ ವೀರ ಸಿಂಧೂರ ಪ್ರಶಸ್ತಿ ಪ್ರಧಾನ ಗೌರವಾಭಿಮಾನದ ಅಭಿನಂದನಾ ಕಾರ್ಯಕ್ರಮ ಸೆ.2 ರoದು ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಾಲ್‌ನಲ್ಲಿ‌ ಜರಗಿತು.

ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸೈನಿಕರ‌‌ ಸoಘದ ಪ್ರಮುಖರು ಸೂರಪ್ಪ ಗೌಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಅಲ್ಲಂದೋಡಿ‌, ಉಪಾಧ್ಯಕ್ಷರಾದ ರುದೇಶ್ ಕುಮಾರ್, ಯಶೋದರ ಶೆಟ್ಟಿ ಅರ್ಕಜೆ, ನವೀನ್ ಪಡಂಗಡಿ, ಸoತೋಷ್ ಕುಮಾರ್ ಜೈನ್ ಪಡoಗಡಿ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಕುಲಾಲ್, ಪ್ರಮುಖರಾದ ಆನಂದ ಶೆಟ್ಟಿ ವಾತ್ಸಲ್ಯ, ಎಸ್ ಗಂಗಾಧರ ರಾವ್ ಕೆವುಡೇಲು, ವಿವೇಕಾನಂದ ಶೆಣೈ ಮದ್ದಡ್ಕ, ಶ್ರೀಧರ ಪೂಜಾರಿ ವರಕಬೆ, ಗಂಗಾಧರ ಪೂಜಾರಿ ವರಕಬೆ, ಅಶ್ವಿತ್ ಕುಲಾಲ್ ಓಡೀಲು, ಸಂದೇಶ್ ಅನಿಲ, ಯೋಗೇಶ್ ಶೆಟ್ಟಿ ಅನಿಲ, ಮನಮೋಹನ್ ನಾಯಕ್, ಗಣೇಶ್ ಶೆಟ್ಟಿ ಅರ್ಕಜೆ, ವಿಠಲ ಆಚಾರ್ಯ ಗುರುವಾಯನಕೆರೆ, ಜಯರಾಮ್ ಶೆಟ್ಟಿ ಕೆoಬರ್ಜೆ ಮತ್ತಿತರರು ಉಪಸ್ಥಿತರಿದ್ದರು.

Related posts

ಡಿ.30 : ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದ ನೇತೃತ್ವದಲ್ಲಿ 3ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಇಂದಬೆಟ್ಟುವಿನಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನ

Suddi Udaya

ವಶಕ್ಕೆ ಪಡೆಯಲಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಬಂಧನ

Suddi Udaya

ಸುದ್ದಿ ಉದಯ ವರದಿ ಫಲಶ್ರುತಿ: ಗುರುವಾಯನಕೆರೆ ಮೋರಿ ಸಂಪೂರ್ಣ ಮುಚ್ಚಿದ ಪರಿಣಾಮ ಇದೀಗ ನಗರ ಪಂಚಾಯತ್ ವತಿಯಿಂದ ಮೋರಿ ಅಳವಡಿಕೆ

Suddi Udaya

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಇದರ 8 ನೇ ವಾರ್ಷಿಕ ಹಾಗೂ 3 ನೇ ಸನದುದಾನ ಮಹಾ ಸಮ್ಮೇಳನ

Suddi Udaya

ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ದ ವತಿಯಿಂದ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ

Suddi Udaya
error: Content is protected !!