March 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ‘ಟೆಕ್ ಯುವ – 25’

ಮಂಗಳೂರು: ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಯಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ ‘ಟೆಕ್ ಯುವ – 25’ ಮಾ.12 ರಂದು ಉದ್ಘಾಟನೆಗೊಂಡಿತು.

ಬೆಂಗಳೂರಿನ ಐಸ್ಪಿ ಆಕ್ರೋ ರೋಬೋಟಿಕ್ಸ್ ಹಾಗೂ ಮಂಗಳೂರಿನ ಅಗ್ರಿಲೀಫ್ ಪೈವೇಟ್ ಲಿಮಿಟೆಡ್ ಸಂಸ್ಥೆ ಮುಖ್ಯಸ್ಥ, ಸಿಇಒ ಅವಿನಾಶ್ ರಾವ್, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಿಮ್ಮ ಸುತ್ತಮುತ್ತಲಿರುವ ಜನರೊಂದಿಗೆ ಸಂವಹನ ನಡೆಸಿ, ಅವರ ಜೀವನ ಅನುಭವಗಳಿಂದ ಪ್ರೇರಿತರಾಗಿರಿ. ಉತ್ತಮ ನಾಯಕನಾಗಲು ತಂಡದೊಂದಿಗೆ ಕೆಲಸ ಮಾಡುವುದು ಅಗತ್ಯ. ಉತ್ತಮ ಸಂವಹನವು ವ್ಯವಹಾರ ಅಭಿವೃದ್ಧಿಗೆ ಅತ್ಯಗತ್ಯ ಎಂದರು.

ಶ್ರೀನಿವಾಸ್ ವಿವಿ ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಮುಖ್ಯಸ್ಥ ಡಾ. ರಾಮಕೃಷ್ಣಎನ್. ಹೆಗಡೆ ಸ್ವಾಗತಿಸಿದರು. ಟೆಕ್ ಯುವ ಕಾರ್ಯಕ್ರಮದ ಸಂಚಾಲಕ ಪ್ರೊ. ಕೆ.ಶ್ರೀನಾಥ್ ರಾವ್ ಅತಿಥಿ ಪರಿಚಯ ಮಾಡಿದರು. ವಿವಿ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಡಾ. ಶ್ವೇತಾ ಪೈ ವಂದಿಸಿದರು. ವಿವಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಬಿ.ಎಂ., ಟೆಕ್ ಯುವ-25 ರ ವಿದ್ಯಾರ್ಥಿ ಸಮನ್ವಯ ಕಾರರಾದ ಮೊಹಮ್ಮದ್ ಸೈಫಾಜ್, ಆಕಾಶ್ ಕುಲಾಲ್, ಚೈತ್ರಾ ರಾವ್, ಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸ್ಯಾಮ್ ಅವಿನ್ ಬಂಗೇರಾ ನಿರೂಪಿಸಿದರು.

Related posts

ಮದ್ದಡ್ಕ ತಾಯಿ‌ ಪಿಲಿಚಾಮುಂಡಿ‌ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

Suddi Udaya

ನಿವೃತ್ತ ಯೋಧ ಫ್ರಾನ್ಸಿಸ್ ರವರಿಗೆ ಉಜಿರೆ ಕೆಎಸ್ಎಂಸಿಎ ಸಂಘಟನೆ ಮತ್ತು ಊರ ಗಣ್ಯರಿಂದ ಭವ್ಯ ಸ್ವಾಗತ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ರೂ. 65ಲಕ್ಷ ಲಾಭ, ಶೇ.15 ಡಿವಿಡೆಂಟ್

Suddi Udaya

ಪೆರಿಂಜೆಯ ಶಾಲೆಯಲ್ಲಿ ಉಜಿರೆಯ ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಧ್ವಜಾರೋಹಣ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!