ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನಿಂದ ಉಪ್ಪಾರಪಳಿಕೆ ಶ್ರೀ ಕೃಷ್ಣ ಭಜನಾ ಮಂದಿರದ ನಿರ್ಮಾಣಕ್ಕೆ ರೂ.1 ಲಕ್ಷದ ಚೆಕ್ ನ್ನು ಅಧ್ಯಕ್ಷ ಕೃಷ್ಣ ಭಟ್ ಹಾಗೂ ಕಾರ್ಯದರ್ಶಿ ಕುಶಾಲಪ್ಪ ಗೌಡ ಪೂವಾಜೆ, ಸದಸ್ಯರಾದ ಧರ್ನಪ್ಪ ಕೆಂಪಕೋಡಿ, ಬಬಿತಾ ಕೊಲ್ಲಾಜೆಯವರು ಶ್ರೀ ಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಾಥ್ ಬಡಕೈಲುರವರಿಗೆ ಮಾ. 14ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಜೊತೆ ಕಾರ್ಯದರ್ಶಿ ನವೀನ್ ಆಲಂಬಿಲ, ಸದಸ್ಯರಾದ ಜಗದೀಶ್ ಕೆಂಪಕೋಡಿ, ಬಾಲಕೃಷ್ಣ ಬಲಕ್ಕ, ಪೊಡಿಯ ಗೌಡ ಆಳಂಬಿಲ, ಬಾಲಚಂದ್ರ ಪುಂಚೆತ್ತಿಮಾರ್, ನವೀನ್ ಕೆಂಗುಡೇಲು, ಕೀರ್ತನ ದೇರಾಜೆ , ಮೋಹನ್ ಕೊಡಿಂಗೇರಿ ಉಪಸ್ಥಿತರಿದ್ದರು.