May 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಹಿಂದೂ ರಾಷ್ಟ್ರದ ಉದ್ಘಾರದೊಂದಿಗೆ ಬಂಟ್ವಾಳದ ಸ್ಪರ್ಶಾ ಕಲಾಮಂದಿರದಲ್ಲಿ ಪ್ರಾರಂಭವಾದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ

ಬಂಟ್ವಾಳ: ಪರಿಶುದ್ಧ ಗಂಗೆ ಸ್ವರೂಪ ಹಿಂದೂ ಧರ್ಮ, ಈ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ಹೋಳಿ ಇರಲಿ, ದೀಪಾವಳಿ ಇರಲಿ ಹಿಂದೂಗಳಲ್ಲಿ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ. ಹಿಂದೂಗಳ ಆಚರಣೆಯ ಬಗ್ಗೆ ಪ್ರಸಾರ ಮಾಧ್ಯಮಗಳ ಮುಖಾಂತರ ಅಪಹಾಸ್ಯ ಮಾಡಲಾಗುತ್ತಿದೆ. ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳ ಮೇಲೆ ಆರೋಪಗಳನ್ನು ಮಾಡಲಾಗುತ್ತದೆ. ಹಿಂದೂ ಸಮಾಜ ಜಾಗೃತವಾದರೆ ಇತರ ಪಂಥೀಯರು ಏನೂ ಮಾಡಲು ಸಾಧ್ಯವಿಲ್ಲ. ಸಂತರ ಮೇಲೆ ಆರೋಪಗಳನ್ನು ಹಾಕಲಾಗುತ್ತದೆ, ಆಕ್ರಮಣಗಳನ್ನು ಮಾಡಲಾಗುತ್ತದೆ. ಎಡಪಂಥೀಯರು ಕ್ರಿಟಿಕಲ್ ರೇಸ್ ಥಿಯರಿ ಮುಖಾಂತರ ಹಿಂದೂಗಳನ್ನು ಜಾತಿ ಮತ ಪಂಥಗಳ ಹೆಸರಿನಲ್ಲಿ ವಿಭಜನೆಯನ್ನು ಮಾಡಲಾಗುತ್ತಿದೆ. ಅಮೇರಿಕಾದಿಂದ ಪ್ರಾಯೋಜಿತ ಮತಾಂತರ ಹಾಗೂ ದೇಶ ವಿರೋಧಿ ಷಡ್ಯಂತ್ರಕ್ಕೆ ಹಿಂದೂ‌ ಸಮಾಜ ವ್ಯಾಪಕವಾಗಿ ಬಲಿಯಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರವೆಂದರೆ ನಮ್ಮ ಧರ್ಮ ರಕ್ಷಣೆ ನಮ್ಮದೇ ಕರ್ತವ್ಯವಾಗಿದೆ ಎಂಬ ಅರಿವು ನಮ್ಮಲ್ಲಿ ನಿರ್ಮಾಣವಾಗಬೇಕು. ಧರ್ಮ ರಕ್ಷಣೆಗಾಗಿ ಸರ್ವಸ್ವದ ತ್ಯಾಗ ಮಾಡಲು ನಾವು ಸಿದ್ಧರಾಗಿರಬೇಕು ಎಂದು ಉಪಸ್ಥಿತ ಹಿಂದೂ ಬಾಂಧವರಿಗೆ ಚಕ್ರವರ್ತಿ ಸೂಲಿಬೆಲೆ ಇವರು ಕರೆ ನೀಡಿದರು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ 16 ಮಾರ್ಚ್ 2025, ಭಾನುವಾರದಂದು ಸ್ಪರ್ಶಾ ಕಲಾ ಮಂದಿರ, ಬಿ. ಸಿ. ರೋಡ್, ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನವು ಶಂಖನಾದ ಮತ್ತು ವೇದಮಂತ್ರ ಪಠಣದೊಂದಿಗೆ ಪ್ರಾರಂಭಿಸಲಾಯಿತು. ಅಧಿವೇಶನದ ಉದ್ಘಾಟನೆಯನ್ನು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿಂದುತ್ವನಿಷ್ಠ ವಕೀಲರಾದ ನ್ಯಾ. ಕೃಷ್ಣಮೂರ್ತಿ, ಯುವಾ ಬ್ರಿಗೇಡ್‌ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ, ಉದ್ಯಮಿಗಳಾದ ಶ್ರೀ. ಎಂ. ಜೆ. ಶೆಟ್ಟಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್ ಗೌಡ ಇವರ ದಿವ್ಯ ಹಸ್ತಗಳಿಂದ ದೀಪ ಪ್ರಜ್ವಲನೆಯನ್ನು ಮಾಡಿ ಅಧಿವೇಶನದ ಉದ್ಘಾಟನೆಯನ್ನು ಮಾಡಲಾಯಿತು.

ಸ್ವಾರ್ಥ ಮರೆತು ನಾವು ಪರಮಾರ್ಥದ ಕಡೆಗೆ ಹೋಗಬೇಕಾಗಿದೆ! – ನ್ಯಾಯವಾದಿ ಶ್ರೀ. ಕೃಷ್ಣಮೂರ್ತಿ

ಸ್ವಾರ್ಥ ಮರೆತು ನಾವು ಪರಮಾರ್ಥದ ಕಡೆಗೆ ಹೋಗಬೇಕಾಗಿದೆ, ವಿವಿಧ ಸಂಘಟೆನೆಗಳೆಲ್ಲಾ ಸೇರಿ ಹಿಂದೂ ರಾಷ್ಟ್ರದೆಡೆಗೆ ಸಾಗಬೇಕಾಗಿದೆ. ಇದಕ್ಕಾಗಿ ನ್ಯಾಯ ವ್ಯವಸ್ಥೆಯನ್ನು ಅರಿತುಕೊಂಡು ಅದರ ಸದುಪಯೋಗವನ್ನು ಮಾಡಬೇಕು. ನ್ಯಾಯವಾದಿಗಳು ತಮ್ಮ ಕರ್ತವ್ಯವೆಂದು ರಾಷ್ಟ್ರ ಮತ್ತು ಧರ್ಮದ ವಿಚಾರಗಳಲ್ಲಿ ದಿಟ್ಟ ಹೆಜ್ಜೆಗಳನ್ನಿಡಬೇಕು ಎಂದು ಉಪಸ್ಥಿತ ವಕೀಲರಿಗೆ ಕರೆ ನೀಡಿದರು.

ಅಧಿವೇಶನದಲ್ಲಿ ಹಿಂದೂ ರಾಷ್ಟ್ರ ಆಕ್ಷೇಪ ಮತ್ತು ಖಂಡನೆ, ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ ಈ ೨ ಗ್ರಂಥಗಳ ಇ-ಬುಕ್ ನ ಉದ್ಘಾಟನೆಯನ್ನು ಗಣ್ಯರ ಹಸ್ತದಿಂದ ಮಾಡಲಾಯಿತು.

ಇತಿ ತಮ್ಮ ವಿಶ್ವಾಸಿ,
ಶ್ರೀ ಮೋಹನ ಗೌಡ
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕ: 7204082652)

Related posts

ಕಳೆಂಜ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ಧೃಡ ಕಲಶ ಹಾಗೂ ಅಭಿನಂದನಾ ಸಮಾರಂಭ

Suddi Udaya

ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಪಡೆದು ಇಂದಬೆಟ್ಟು ನಿವಾಸಿಗೆ ರೂ.35 ಸಾವಿರ ವಂಚನೆ

Suddi Udaya

ಮರೋಡಿ ಗ್ರಾ. ಪಂ. ನಲ್ಲಿ ವಿಕಲಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ

Suddi Udaya

ವೇಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಅಪೂರ್ವ ಸಮಾಗಮ “ಸ್ನೇಹ ಸಮ್ಮಿಲನ”

Suddi Udaya
error: Content is protected !!