ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರಬೈಲು ಬಳಿ ದ.ಕ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಹಾಗೂ ಗ್ರಾಮ ಪಂಚಾಯತ್ ಸಹಕಾರದಲ್ಲಿ ನಿರ್ಮಾಣಗೊಂಡ ನೂತನ ಗ್ರಂಥಾಲಯವನ್ನು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಉದ್ಘಾಟಿಸಿ ಗ್ರಂಥಾಲಯಗಳಿಗೆ ಸಾರ್ವಜನಿಕರು, ಭೇಟಿ ನೀಡುವ ಮೂಲಕ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ, ಪಿಡಿಒ ಶ್ರೀನಿವಾಸ್, ಸ್ಥಳೀಯರಾದ ಸುಂದರ್, ಸೇರಿದಂತೆ ಅನೇಕರು ಅನಿಸಿಕೆ ಹಂಚಿಕೊಂಡರು, ಗ್ರಂಥಾಲಯ ಉದ್ಘಾಟನೆ ವೇಳೆ ಪಟಾಕಿ ಸಿಡಿಸಿ ಸ್ಥಳೀಯರು ಸಂಭ್ರಮಿಸಿದರು. ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಸದಸ್ಯರುಗಳಾದ ದಿನೇಶ್ ಶೆಟ್ಟಿ, ಗಣೇಶ್ ಆರ್, ಆಶಾಲತಾ ಪ್ರಶಾಂತ್, ಮೋಹನದಾಸ್ , ಸ್ಥಳೀಯರಾದ ಸುರೇಶ್ ಬೈರ, ಜಗನ್ನಾಥ್ ಲಾಯಿಲ, ರಮೇಶ್ ಆರ್, ರಾಜೇಶ್ ಶೆಟ್ಟಿ ಗಣೇಶ್ ಗ್ಯಾರೇಜ್, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯದರ್ಶಿ ತಾರನಾಥ್ ಸ್ವಾಗತಿಸಿ, ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.