March 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಉಜಿರೆ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ

ಉಜಿರೆ:ತೆರೆ ಮೆರೆಯಲ್ಲಿರುವ ನೂರಾರು ಪ್ರತಿಭೆಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತಿರುವ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಕೆಲಸ ಶ್ಲಾಘನೀಯವಾದುದು ಎಂದು ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆಯ ಉಪಸಂಪಾದಕರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ ಹೇಳಿದರು.

ಅವರು ಮಾ 15 ರಂದು ಉಜಿರೆ ಎಸ್‌ಡಿಎಂ ಡಿಎಡ್ ಕಾಲೇಜಿನಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಇದರ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಕಾಲೇಜು ಮಕ್ಕಳಿಗಾಗಿ ಕ್ವಿಜ್ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಎಸ್ ಡಿ ಎಮ್ ಡಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಧಾನ ಮಾತನಾಡಿ ಕಲೆ,ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಆಮಂತ್ರಣ ಪರಿವಾರ ಸಂಘಟನೆಗೆ ಅಭಿನಂದನೆಗಳು.ಎಲ್ಲರಲ್ಲಿಯೂ ಒಂದೊಂದು ಕಲೆ ಅಡಗಿದೆ. ಅದನ್ನು ಹೊರ ತೆಗೆಯಲು ಅವಕಾಶವನ್ನು ಇಂತಹ ವೇದಿಕೆ ಕಲ್ಪಿಸುತ್ತಿದೆ ಎಂದರು‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾಶ್ರೀ ಅಡೂರ್ ಅವರು ವಹಿಸಿ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿದ ಎಸ್.ಡಿ.ಎಂ ಬಿಎಡ್ ಕಾಲೇಜಿಗೆ ಕೃತಜ್ಞತೆ ಅರ್ಪಿಸಿದರು‌

ವೇದಿಕೆಯಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಸಂಸ್ಥಾಪಕ ವಿಜಯಕುಮಾರ್ ಜೈನ್,ರಾಜ್ಯ ಸದಸ್ಯೆ ಶ್ರೀಮತಿ ಆಶಾ ಅಡೂರು, ಕಾಲೇಜನ ಪ್ರಾಧ್ಯಾಪಕರಾದ ಮಂಜು ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ಘಟಕದ ಸದಸ್ಯರಾದಂತಹ ಶ್ವೇತ ಗೋಡ್ಬೋಲೆ, ನಿರೀಕ್ಷಾ ನಂದಿ ಬೆಟ್ಟ, ಧನ್ಯಶ್ರೀ ಬೆಳಾಲು ಭಾಗವಹಿಸಿದ್ದರು.
ಕಾಲೇಜಿನ ಶಿಕ್ಷಕ ವೃಂದದವರಾದ ತಿರುಮಲೇಶ್ ರಾವ್, ಶ್ರೀಮತಿ ವಿದ್ಯಾಶ್ರೀ ಪಿ, ಶ್ರೀಮತಿ ಅನುಷಾ ಡಿಜೆ., ಶ್ರೀಮತಿ ಚೈತ್ರ, ಶ್ರೀಮತಿ ಪ್ರಿಯದರ್ಶಿನಿ ಸಹಕಾರವನ್ನು ನೀಡಿದರು.

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಸದಸ್ಯೆ ರೇಣುಕಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಸಚಿನ್ ಪ್ರಾರ್ಥನೆಯನ್ನು ಹಾಡಿದರು. ಕಾರ್ಯದರ್ಶಿ ಅಶ್ವಿಜ ಶ್ರೀಧರ್ ವಂದಿಸಿದರು.

ಸಂತಸ ಪಟ್ಟ ವಿದ್ಯಾರ್ಥಿಗಳು: ಸುಮಾರು 90 ವಿದ್ಯಾರ್ಥಿಗಳು ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಮೋಜಿನ ಆಟಗಳನ್ನು ಕೂಡ ಆಯೋಜಿಸಲಾಗಿತ್ತು.ಕರ್ನಾಟಕ ರಾಜ್ಯದಾದ್ಯಂತ ವಿವಿಧ ಭಾಗಗಳಿಂದ ಬಿಎಡ್ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಒಂದು ದಿನದ ಚಟುವಟಿಕೆಯಿಂದಾಗಿ ಅತ್ಯಂತ ಸಂತಸ ಪಟ್ಟರು.

Related posts

ನಿಡಿಗಲ್-ಪಜಿರಡ್ಕ ಕಾಂಕ್ರೀಟ್ ರಸ್ತೆಯಲ್ಲಿ ಕುಸಿತ ಭೀತಿ

Suddi Udaya

ಎಸ್. ಡಿ. ಎಂ. (ಸ್ವಾಯತ್ತ) ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ಸದ್ಭಾವನಾ ದಿವಸ್ ಆಚರಣೆ

Suddi Udaya

ವಿ.ಹಿ.ಪ ಬಜರಂಗದಳ ಕಳೆಂಜ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ನಡ ಸ. ಪ. ಪೂ ಕಾಲೇಜಿನ ವಿದ್ಯಾರ್ಥಿನಿ ಕು. ಸವಿತಾ ದ್ವಿತೀಯ ಸ್ಥಾನ

Suddi Udaya

ಸುದ್ದಿ ಉದಯ ಫಲಶ್ರುತಿ: ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆರವುಗೊಳಿಸಿದ ಮೆಸ್ಕಾಂ ಇಲಾಖೆ

Suddi Udaya

ಅನಾಥರಾಗಿ ತಿರುಗಿಡುತ್ತಿದ್ದ ವಯೋವೃದ್ಧ ತಂದೆಯನ್ನು ಮಗನ ಜವಾಬ್ದಾರಿ ಗೆ ವಹಿಸಿದ ವೇಣೂರು ಪೋಲೀಸರು

Suddi Udaya
error: Content is protected !!