ಬೆಳ್ತಂಗಡಿ ತಾಲೂಕಿನಲ್ಲಿ ಜೆಸಿಐ ಬೆಳ್ತಂಗಡಿ ವತಿಯಿಂದ ಅಗತ್ಯ ಇರುವಲ್ಲಿಗೆ ಶಾಶ್ವತ ಯೋಜನೆ ಮಾಡುವ ಉದ್ದೇಶದಿಂದ
ಫೆಬ್ರವರಿ 17 ರಂದು ಜೇಸಿ ಸದಸ್ಯರಿಗೆ ಜೆಸಿಐ ಅ್ಯಕ್ಷನ್ ಫ್ರೇಮ್ ವರ್ಕ್ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು ಜೇಸಿ ರಾಷ್ಟ್ರೀಯ ತರಬೇತುದಾರ ಮಂಗಳೂರಿನ ಜೇಸಿ ದೀಪಕ್ ರಾಜ್ ಇವರು ತರಬೇತಿಯನ್ನು ನಡೆಸಿಕೊಟ್ಟರು.

ತಾಲೂಕಿನಲ್ಲಿ ಯಾವ ಸಮಸ್ಯೆ ಇದೆ ಅದಕ್ಕೆ ಜೆಸಿಐ ಬೆಳ್ತಂಗಡಿ ಇಂದ ಯಾವ ಪರಿಹಾರ ಮಾಡಬಹುದು ಮತ್ತು ಯಾವ ಶಾಶ್ವತ ಯೋಜನೆಯಿಂದ ಸಾರ್ವಜನಿಕರಿಗೆ ಉಪಯೋಗ ಆಗಬಹುದು, ಪರಿಣಾಮಕಾರಿಯಾಗಬಲ್ಲುದು ಎಂಬುದರ ಬಗ್ಗೆ ಸವಿಸ್ತಾರವಾಗಿ ತರಬೇತಿಯನ್ನು ನಡೆಸಿಕೊಟ್ಟರು. ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಇವರು ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೇಸಿ ಅರುಣಾ ಜಯರಾಜ್ ಕಾರ್ಯಕ್ರಮವನ್ನು ಸಂಯೊಜಿಸಿದರು. ಜೇಸಿ ರಜತ್ ಮೋರ್ತಾಜೆ ತರಬೇತುದಾರರನ್ನು ಪರಿಚಯಿಸಿದರು. ಕಾರ್ಯದರ್ಶಿ ಶೈಲೇಶ್ ಕೆ ಇವರು ವಂದಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಮಹಿಳಾ ಜೇಸಿ ಸಂಯೋಜಕಿ ಚಿತ್ರಪ್ರಭ , ಜೂನಿಯರ್ ಜೇಸಿ ಅಧ್ಯಕ್ಷೆ ದೀಪ್ತಿ ಕುಲಾಲ್, ನಿಕಟ ಪೂರ್ವಾಧ್ಯಕ್ಷರಾದ ರಂಜಿತ್ ಎಚ್‌ಡಿ ಮತ್ತು ಪೂರ್ವಾಧ್ಯಕ್ಷರು, ಜೇಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.