ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿಯ ಜೇಸಿ ಭವನದಲ್ಲಿ ಪದಾಧಿಕಾರಿಗಳಿಗೆ ಘಟಕ ಅಭಿವೃದ್ದಿ ಮತ್ತು ಆಡಳಿತ ನಿರ್ವಹಣೆ ತರಬೇತಿ ನಡೆಸಲಾಯಿತು.
ಜೇಸಿ ಆಶಾಲತಾ ಪ್ರಶಾಂತ್ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ತರಬೇತುದಾರರಾಗಿ ವಲಯ ಉಪಾಧ್ಯಕ್ಷ ಜೆಎಫ್ಎಮ್ ರಂಜಿತ್ ಎಚ್‌ಡಿ ಇವರು ಜೆಸಿಐ ರಾಷ್ಟ್ರೀಯ ಮತ್ತು ವಲಯದ ಮಾರ್ಗದರ್ಶನ ಹಾಗೂ ಪದಾಧಿಕಾರಿಗಳ ಕರ್ತವ್ಯ ಮತ್ತು ಘಟಕದ ನಿರ್ವಹಣೆ ಕುರಿತು ತರಬೇತಿಯನ್ನು ನೀಡಿದರು.

ವೇದಿಕೆಯಲ್ಲಿ ಮಹಿಳಾ ಜೇಸಿ ಸಂಯೋಜಕಿ ಚಿತ್ರಪ್ರಭ ಮತ್ತು ಜೂನಿಯರ್ ಜೇಸಿ ಅಧ್ಯಕ್ಷೆ ದೀಪ್ತಿ ಕುಲಾಲ್ ಉಪಸ್ಥಿತರಿದ್ದರು.
ಜೇಸಿ ರಜತ್ ಮೋರ್ತಾಜೆ ಇವರು ವೇದಿಕೆ ಆಹ್ವಾನಿಸಿ, ಕಾರ್ಯಕ್ರಮ ಸಂಯೋಜಕ ಜೇಸಿ ರಕ್ಷಿತ್ ಅಂಡಿಂಜೆ ತರಬೇತುದಾರರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಜೇಸಿ ರಾಮಕೃಷ್ಣ ಶರ್ಮ ಧನ್ಯವಾದ ಸಲ್ಲಿಸಿದರು.

ಸಭಾಧ್ಯಕ್ಷರು ಸಭೆಯನ್ನು 3 ನೇ ಪದಾಧಿಕಾರಿಗಳ ಸಭೆಗೆ ಮುಂದೂಡಿದರು. ತರಬೇತಿ ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.