ಪಟ್ರಮೆ: ಪಟ್ರಮೆ ಸ್ಪಂದನ ಸಂಜೀವಿನಿ ಒಕ್ಕೂಟದ ಮಹಾಸಭೆ ಒಕ್ಕೂಟ ಅಧ್ಯಕ್ಷೆ ರೂಪಲತಾ ಅಧ್ಯಕ್ಷತೆಯಲ್ಲಿ ಮಾ.19 ರಂದು ಪಟ್ರಮೆ ಗ್ರಾಮಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಗ್ರಾ.ಪಂ. ಅಧ್ಯಕ್ಷ ಮನೋಜ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರ.ಪಿಡಿಓ ಅಮ್ಮಿ ಪೂಜಾರಿ ಹಾಗೂ ವಲಯ ಮೇಲ್ವಿಚಾರಕಿ ವೀಣಾಶ್ರೀ ಉಪಸ್ಥಿತರಿದ್ದರು. ಈ ವೇಳೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ನಳಿನಿ ಮತ್ತು ವಿದ್ಯಾ ಪ್ರಾರ್ಥಿಸಿದರು. ವಿದ್ಯಾ ಸರಸ್ವತಿ ವರದಿ ವಾಚಿಸಿದರು. ಕೃಷಿಸಖಿ ವಿನಂತಿನಿ ಸ್ವಾಗತಿಸಿ, ಎಂಬಿಕೆ ಜಯ ನಿರೂಪಿಸಿದರು.