ಬೆಳ್ತಂಗಡಿ: ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ , ಹಲ್ಲೆ ನಡೆಸಿದ ಘಟನೆ ಅತ್ಯಂತ ಅಮಾನವೀಯವಾದುದು. ಇದು ನಾಗರಿಕ ಸಮಾಜದ ಅನಾಗರಿಕ ವರ್ತನೆಯ ಪರಮಾವಧಿಯಾಗಿದೆ. ವಿದ್ಯಾವಂತ ಜಿಲ್ಲೆಯಲ್ಲಿ , ಅಜ್ಞಾನಿಗಳು ಇನ್ನೂ ಜೀವಂತವಿರುವುದಕ್ಕೆ ಉತ್ತಮ ಉದಾಹರಣೆ. ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡುವ ಬದಲಾಗಿ ಘಟನೆಯನ್ನು ತಡೆಯಲು ಪ್ರಯತ್ನಿಸದಿರುವುದು ಮಾನವೀಯತೆ ಸತ್ತಿರುವುದಕ್ಕೆ ಸಾಕ್ಷಿ. ಘಟನೆಯಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಮಲ್ಪೆ ಪೋಲಿಸರ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸಬೇಕು . ಘಟನೆ ನಡೆದು ಒಂದು ದಿನ ತಡವಾಗಿ ಪ್ರಕರಣ ದಾಖಲಿಸಿರುವುದು ಅತ್ಯಂತ ಖಂಡನೀಯ.
ಈ ಹಿಂದೆ ಬೆತ್ತಲೆ ಪ್ರಕರಣದಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ ಘಟನೆಯ ನಂತರ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸುವ ಮೂಲಕ ಮತ್ತೊಮ್ಮೆ ಕರಾವಳಿಗರು ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಲಾಗಿದೆ. ಈ ಘಟನೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಬೇಕು. ಶೇಖರ್ ಲಾಯಿಲಸಂಚಾಲಕಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ