ವೇಣೂರು: ನಿಟ್ಟಡೆ ಗ್ರಾಮದ ಪಾರೊಟ್ಟು ಎಂಬಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.20 ರಂದು ನಡೆದಿದೆ.
ರವಿ ಪೂಜಾರಿ [58ವ] ಮೃತಪಟ್ಟ ವ್ಯಕ್ತಿ.
ಮೃತ ರವಿ ಪೂಜಾರಿ ಎಂಬವರು ತನ್ನ ಯಾವುದೋ ವೈಯ್ಯಕ್ತಿಕ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನಿಟ್ಟಡೆ ಗ್ರಾಮದ ಪಾರೋಟ್ಟು ಎಂಬಲ್ಲಿ ಮೃತರ ಅಂಗಳದ ಬಳಿ ಇದ್ದ ವಿಜಯರವರ ಬಾಬ್ತು ಜಮೀನಿನ ರಬ್ಬರ್ ಮರದ ರೆಂಬೆಗೆ ನೈಲನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.