ಅಳದಂಗಡಿ: ಶ್ರೀ ಸೋಮನಾಥೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಅಳದಂಗಡಿ ಇದರ ನೇತೃತ್ವದಲ್ಲಿ-ವಿವಿಧ ಭಜನಾ ಮಂಡಳಿ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎ.11ರಂದು ಅಳದಂಗಡಿಯಲ್ಲಿ ಜರುಗಲಿರುವ ಭಜನಾ ಕಮ್ಮಟೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ ಅಜಿಲರವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ರಘು ದೇವಾಡಿಗ ನಡಾಯಿ, ಕಾರ್ಯದರ್ಶಿ ಕೊರಗಪ್ಪ ಪೂಜಾರಿ ನೀರಲ್ಕೆ, ಉಪಾಧ್ಯಕ್ಷ ಇಂಧುದರ್, ಜೊತೆ ಕಾರ್ಯದರ್ಶಿ ಯಶೋಧರ ಸುವರ್ಣ ಬಿಕ್ಕಿರ, ಕಮ್ಮಟೋತ್ಸವದ ಜೊತೆ ಕಾರ್ಯದರ್ಶಿ ಆನಂದ್ ಪೂಜಾರಿ,
ಮಕ್ಕಳ ಸಮಿತಿಯ ಅಧ್ಯಕ್ಷೆ ಕು.ಶರಣ್ಯ ಉಪಸ್ಥಿತರಿದ್ದರು.