ನಡ: ಇಲ್ಲಿಯ ಕನ್ಯಾಡಿ ಗ್ರಾಮದ ಪಾರ್ನಡ್ಕ ದಲ್ಲಿ ದಿ| ರಾಜೇಂದ್ರ ಎಸ್ ಸುರಕ್ಕ್ಯೆಗುತ್ತು ಇವರ ಸ್ಮರಣಾರ್ಥ ಧನ್ಯ ಕುಮಾರಿ ಮತ್ತು ಮಕ್ಕಳಿಂದ ಕೊಡುಗೆಯಾಗಿ ಬಸ್ ತಂಗುದಾಣವನ್ನು ಲೋಕಾರ್ಪಣೆಗೊಳಿಸಲಾಯಿತು.


ನೂತನ ಬಸ್ ತಂಗುದಾಣನ್ನು ಡಾ| ಪ್ರದೀಪ್ ನಾವೂರು ಆರೋಗ್ಯ ಕ್ಲಿನಿಕ್ ಉದ್ಘಾಟಿಸಿದರು.
ಈ ವೇಳೆ ನಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ನಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯ ಶೆಟ್ಟಿ
ಬೊಲ್ಲೊಟ್ಟು, ಬೆಳ್ತಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಜಿತ್ ಕುಮಾರ್ ಆರಿಗ, ರಾಜಶೇಖರ ಜಿ ಮೂಡಬೆಟ್ಟು, ಶಶಿಕಿರಣ್ ಜೈನ ವಕೀಲರು, ಪಂಚಾಯತ್ ಸದಸ್ಯ ಪ್ರವೀಣ್ ವಿಜಿ ಉಪಸ್ಥಿತರಿದ್ದರು.