ಕಳೆಂಜ : ಇಲ್ಲಿಯ ಪಲ್ಲದಂಗಡಿ ಕಾಂತ್ರೇಲು ಹಾಗೂ ಹತ್ಯಡ್ಕ ಗ್ರಾಮದ ಮುದ್ದಿಗೆ, ಕುಂಟಾಲಪಳಿಕೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಮಾ.19 ರಂದು ಕೆಎಸ್ ಆರ್ ಟಿಸಿ ಬಸ್ಸು ಸಂಚಾರ ಪ್ರಾರಂಭವಾಗಿದ್ದು ಇಂದು(ಮಾ.21) ಮುದ್ದಿಗೆ ಎಂಬಲ್ಲಿ ಊರವರಿಂದ ಬಸ್ಸಿಗೆ ಚಾಲನೆ ನೀಡಲಾಯಿತು.

ಬಸ್ಸಿನ ಸಮಸ್ಯೆ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ರವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು ತಕ್ಷಣವೇ ಸ್ಪಂದಿಸಿ ಅವರು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದರು, ನಂತರ ತ್ವರೀತ ಕಾರ್ಯಕ್ಕಾಗಿ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರಿಗೆ ಮನವಿ ಸಲ್ಲಿಸಿದಾಗ ಕೂಡಲೇ ಸ್ಪಂದಿಸಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿ ಮಾ.19 ರಂದು ಮುದ್ದಿಗೆ ತನಕ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಪಂ. ಸ್ಥಳೀಯ ಸದಸ್ಯರಾದ ಪ್ರೇಮಚಂದ್ರ ಕೆ. ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೋಸ್ತೋಟ, ದಿವಾಕರ್ ತಾಮ್ಹನಕಾರ್, ಕಳೆಂಜ ಗ್ರಾ.ಪಂ ಸದಸ್ಯ ಗಣೇಶ್ ಕುಂದರ್, ಮಾಜಿ ಸೈನಿಕರಾದ ಮಹಾಬಲ ರಾಣ್ಯ ಮತ್ತು ಮೋಹನ್ ಶೆಟ್ಟಿ ,ಕಪಿಲಕೇಸರಿ ಕುಂಟಾಲಪಳಿಕೆ ಅಧ್ಯಕ್ಷರಾದ ರಾಜೇಶ್ ಬೊಳ್ಳೊಡಿ, ಪ್ರಸನ್ನ ನಾಯ್ಕ ಮತ್ತು ಕಳೆಂಜ ಶಕ್ತಿಕೇಂದ್ರ ಅಧ್ಯಕ್ಷರು & ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ಪ್ರಾ.ಸ.ಸಂಘ ನಿಡ್ಲೆಯ ನಿಕಟಪೂರ್ವ ಅಧ್ಯಕ್ಷರು ಹಾಲಿ ನಿರ್ದೇಶಕ ರಮೇಶ್ ರಾವ್ ಕಾಯಡ, ಜಯಚಂದ್ರ ಬಲ್ಕಾಜೆ ಹಾಗೂ ಊರವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.