September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಿ ಕೊಡುವುದಾಗಿ ನಂಬಿಸಿ, ರೂ. 4.95 ಲಕ್ಷ ವಂಚನೆ ಆರೋಪ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ವೇಣೂರು: ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ನನ್ನಿಂದ ರೂ. 4.95 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಮೂಡುಕೋಡಿ ಗ್ರಾಮದ ವಿ.ಎ ಸುದೇಶ್ ಕುಮಾರ್ ಹಾಗೂ ಅವರ ಪತ್ನಿಯ ವಿರುದ್ದ ಆರೋಪ ಹೊರಿಸಿ, ಅದೇ ಗ್ರಾಮದ ನಿವಾಸಿ ರೋಯಿ ವರ್ಗೀಸ್ ಎಂಬವರು ವೇಣೂರು ಪೊಲೀಸ್ ಠಾಣೆಗೆ ಮಾ.19 ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.


ರೋಯಿ ವರ್ಗೀಸ್ ಅವರು ಮೂಡುಕೋಡಿ ಗ್ರಾಮದಲ್ಲಿ ಪಟ್ಟಾ ಜಮೀನು ಹೊಂದಿದ್ದು ಅದಕ್ಕೆ ತಾಗಿಕೊಂಡಿರುವ ಕುಮ್ಕಿ ಜಮೀನಿಗೆ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ, ತಾನು ಸಹಕರಿಸುವುದಾಗಿ ಸುದೇಶ್ ಕುಮಾರ್ ತಿಳಿಸಿದ್ದಂತೆ ರೋಯಿ ವರ್ಗೀಸ್ ಅರ್ಜಿ ಸಲ್ಲಿಸಿದ್ದರು. ಸುದೇಶ್ ಕುಮಾರ್ 2023 ಮಾ. 22 ರಂದು ಸರ್ವೆ ನಂಬ್ರ: ೧೭೩/೩ ಮತ್ತು ೧೨೦/೩ ಆ೧ ರ ಸರ್ವೆ ನಡೆಸಿ ಲಂಚ ನೀಡಲು ಬೇಡಿಕೆ ಇಟ್ಟ ಮೇರೆಗೆ ರೋಯಿ ವರ್ಗೀಸ್ ಸುದೇಶ್ ಕುಮಾರ್ ಪತ್ನಿಯ ಬ್ಯಾಂಕ್ ಖಾತೆಗೆ ೨೦೨೩ ಮಾ. ೨೨ ರಂದು ರೂ. ೮೦ ಸಾವಿರ ಹಾಗೂ ತದನಂತರದ ದಿನಗಳಲ್ಲಿ ಒಟ್ಟು 5 ಸಲ ರೂ 4.55 ಲಕ್ಷ, ವರ್ಗಾವಣೆ ಮಾಡಿದ್ದು ಅಲ್ಲದೇ 2023 ಮಾ.22 ರಂದು ರೂ ೨೦ ಸಾವಿರ, ಹಾಗೂ ೨೦೨೩ ನ.೧೦ ರಂದು 5 ಸಾವಿರ ನಗದು ನೀಡಿದ್ದಲ್ಲದೇ, ೨೦೨೩ ನ. ೧೯ ರಂದು ಸುದೇಶ್ ಅವರ ಸೂಚನೆಯಂತೆ ಶರಣ್ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಗೆ ಔತಣ ಕೂಟದ ಬಗ್ಗೆ 15 ಸಾವಿರ ರೂ ವರ್ಗಾಯಿಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.


ತದನಂತರ ಸುದೇಶ್ ಕುಮಾರ್ ಅವರು ನೀವು ನೀಡಿರುವ ಅಕ್ರಮ-ಸಕ್ರಮ ಜಮೀನು ಮಂಜೂರುಗೊಳಿಸಲು ಅದು ಅರಣ್ಯ ಇಲಾಖೆಗೆ ಸೇರಿರುವ ಜಮೀನು ಆಗಿರುವುದರಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದು, ತಾನು ನೀಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಸುದೇಶ್ ಕುಮಾರ್ ತಾನು ಯಾವುದೇ ಹಣವನ್ನು ನನ್ನ ಖಾತೆಗೆ ಸ್ವೀಕರಿಸಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ಒಟ್ಟು ೪.೯೫ ಲಕ್ಷ ರೂ ಪಡೆದು ಜಮೀನು ಅಕ್ರಮ ಸಕ್ರಮದಲ್ಲಿ ಮಂಜೂರುಗೊಳಿಸುವುದಾಗಿ ತಿಳಿಸಿ ಜಮೀನು ಮಂಜೂರು ಮಾಡಿಸಿಕೊಡದೇ ಹಾಗೂ ಹಣವನ್ನು ವಾಪಾಸು ನೀಡದೇ ವಂಚಿಸಿರುವುದಾಗಿ ಅಪಾದಿಸಿ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ೧೮೬೦ (u/s ೪೧೭, ೪೨೦) ಯಂತೆ ಪ್ರಕರಣ ದಾಖಲಿಸಲಾಗಿದೆ.

Related posts

ಮರೋಡಿ: ಪೊಸರಡ್ಕ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಸಂಭ್ರಮ, ಧಾರ್ಮಿಕ ಸಭೆ-ಶ್ರದ್ದಾ ಕೇಂದ್ರಗಳ ಅಭಿವೃದ್ಧಿಯಿಂದ ಬದುಕಿನಲ್ಲಿ ನೆಮ್ಮದಿ: ಸುಮಂತ್ ಕುಮಾರ್ ಜೈನ್-ಇಂದು (ಎ. 1) ಶ್ರೀ ಬ್ರಹ್ಮ ಬೈದರ್ಕಳ ಹಾಗೂ ಶ್ರೀ ಮಾಯಂದಾಲೆ ನೇಮೋತ್ಸವ

Suddi Udaya

ಬೆಳ್ತಂಗಡಿ : ಆಭರಣ ಜ್ಯುವೆಲರಿಗೆ ಐಟಿ ದಾಳಿ ಪ್ರಕರಣ: ಬೆಳ್ತಂಗಡಿ ಆಭರಣ ಶಾಪ್ ನ ಐಟಿ ದಾಳಿ ಮುಕ್ತಾಯ

Suddi Udaya

ಮೇ 21: ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ಮಾನ್ಸೂನ್ ಸೇಲ್ : ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ಡಿಸ್ಕೌಂಟ್

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಅಳದಂಗಡಿ ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಕನ್ಯಾಡಿ ಶ್ರೀ ಗುರುದೇವ ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಕಲ್ಮಂಜದ ಮತಗಟ್ಟೆಗೆ ಶಾಸಕ ಹರೀಶ್ ಪೂಂಜ ಹಾಗೂ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya
error: Content is protected !!