ಬೆಳ್ತಂಗಡಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಪಡೆದು ಇಂದಬೆಟ್ಟು ನಿವಾಸಿಗೆ ರೂ.35 ಸಾವಿರ ವಂಚಿಸಿದ ಘಟನೆ ಮಾ.19ರಂದು ವರದಿಯಾಗಿದೆ.
ಇಂದಬೆಟ್ಟು ಗ್ರಾಮದ ಕಜೆ ಶಾಂತಿನಗರ ನಿವಾಸಿ ಪುರುಷೋತ್ತಮ ರವರು ಮಡಂತ್ಯಾರು ಗ್ರೀನ್ ಪ್ರಾಲೇಶ್ ಬಾರ್ ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡಿಕೊಂಡಿದ್ದು , ಈ ಹಿಂದೆ ಆರ್.ಬಿ.ಎಲ್ ಬಜಾಜ್ ಫೈನಾನ್ಸ್ ನಿಂದ ಕ್ರೆಡಿಟ್ ಕಾರ್ಡ್ ಮಾಡಿಸಿದ್ದು ಇತ್ತೀಚಿಗೆ 35000 ಹಣ ಪಡೆದಿದ್ದು ಸದ್ರಿ ಹಣ ಕಾರ್ಡ್ ನಲ್ಲಿ ಇತ್ತು. ಮಾ.19 ರಂದು ಅಪರಿಚಿತ ನಂಬರ್ ನಿಂದ ಕರೆ ಬಂದಿದ್ದು ಆರ್ ,ಬಿ,ಎಲ್ ಬ್ಯಾಂಕಿನಿಂದ ಮೆನೇಜರ್ ಕರೆ ಮಾಡುತಿದ್ದು ನಿಮ್ಮ ಅಕೌಂಟಿನಲ್ಲಿ ಈಗ ಕಡಿಮೆ ಹಣ ಇದ್ದು ಅದಕ್ಕೆ ಹೆಚ್ಚು ಸಿಬಿಲ್ ಸ್ಕೋರ್ ಬರಬೇಕಾದರೆ 1 ಲಕ್ಷ ಹಣ ಬೇಕಾಗಿದ್ದು ನಿಮ್ಮ ಕಾರ್ಡ್ ನ್ನು ನಾನು ವಿಡಿಯೋ ಕಾಲ್ ಮಾಡಿ ಅಪ್ಡೇಟ್ ಮಾಡುತ್ತೇನೆ. ಅದಕ್ಕೆ ನಿಮ್ಮ ಕಾರ್ಡ್ ನ್ನು ತೋರಿಸಿ ನಾನು ಹೇಳಿದ ಹಾಗೆ ಅದರ ನಂಬ್ರಗಳನ್ನು ನನಗೆ ತಿಳಿಸಿ ಆಗ ನಿಮ್ಮ ಅಕೌಂಟಿಗೆ 1 ಲಕ್ಷ ಹಣ ಈಗಲೇ ಬರತ್ತದೆ. ಎಂದು ಹೇಳಿದಕ್ಕೆ ಪುರುಷೋತ್ತಮರವರು ನಂಬಿ ಕಾರ್ಡ್ ನ ಎಲ್ಲಾ ನಂಬ್ರಗಳನ್ನು ಹಾಗೂ ಆತ ಹೇಳಿದ ಹಾಗೆ ಓ.ಟಿ.ಪಿ ನಂಬ್ರಗಳನ್ನು ನೀಡಿದ್ದು, ಸ್ವಲ್ಪ ಹೊತ್ತಿನ ಬಳಿಕ ಪುರುಷೋತ್ತಮ ರವರ ಮೊಬೈಲಿಗೆ ಅಕೌಂಟಿನಲ್ಲಿದ್ದ ಹಣ 35000 / -ಕಡಿತವಾದ ಬಗ್ಗೆ ಸಂದೇಶ ಬಂದಿದ್ದು ಕೂಡಲೆ ಪುರುಷೋತ್ತಮ ರವರು ಮೋಸ ಹೋಗಿರುವ ಬಗ್ಗೆ ತಿಳಿದುಬಂದಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.