22 C
ಪುತ್ತೂರು, ಬೆಳ್ತಂಗಡಿ
March 25, 2025
Uncategorized

ಸೂಪರ್ ಕ್ಯಾರಿ ಟರ್ಬೋ ವಾಹನ ದಲ್ಲಿ ಹಿಂಸಾತ್ಮಕವಾಗಿ 3 ಜಾನುವಾರುಗಳ ಅಕ್ರಮ ಸಾಗಾಟ: ವಾಹನ ಸಹಿತ ಇಬ್ಬರ ಬಂಧನ

ಬೆಳ್ತಂಗಡಿ: ಪೆರ್ಮುಡ ಕಡೆಯಿಂದ ಸೂಪರ್ ಕ್ಯಾರಿ ಟರ್ಬೋ ವಾಹನ ದಲ್ಲಿ ಹಿಂಸಾತ್ಮಕವಾಗಿ 3 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ‌ಬಂಧಿಸಿ ಜಾನುವಾರುಗಳನ್ನು ವಶಪಡಿಸಿಕೊಂಡ ಪ್ರಕರಣ ಮಾ.22ರಂದು ವರದಿಯಾಗಿದೆ.

ಇಮ್ತೀಯಾಜ್‌ (29 ವರ್ಷ) ತಂದೆ: ಹಸನಬ್ಬ, ವಾಸ: ಕೋರ್ಟ್‌ ರಸ್ತೆ , ಸಂಜಯ ನಗರ,ಬೆಳ್ತಂಗಡಿ ಕಸಬಾ ಗ್ರಾಮ ಮತ್ತು
ರಮ್ಲ @ಆಸೀಪ್‌ ( 26 ವರ್ಷ) ತಂದೆ: ಅಬ್ದುಲ್‌ ರಹಿಮಾನ್‌, ವಾಸ: ಪಾದೆ ಮನೆ, ಪಡಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕು, ಬಂಧಿತ ಆರೋಪಿಗಳು.
ಘಟನೆ ವಿವರ:
ವೇಣೂರು ಪೊಲೀಸ್‌ ಠಾಣೆಯ ಎಸ್ .ಐ ಶ್ರೀ ಶೈಲ ಡಿ ಮುರುಗೋಡ್‌ ಅವರು ಮಾ.22ರಂದು ಸಿಬ್ಬಂದಿಗಳೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುತ್ತಾ ಬೆಳಿಗ್ಗೆ ಸುಮಾರು 11:45 ಕ್ಕೆ ಬೆಳ್ತಂಗಡಿ ತಾಲೂಕು ನಾಲ್ಕೂರು ಗ್ರಾಮದ ಕುಕ್ಕನಡ್ಕ ಎಂಬಲ್ಲಿಗೆ ತಲುಪುವಾಗ ಬಳಂಜ –ಪೆರ್ಮುಡ – ವೇಣೂರು ಸಾರ್ವಜನಿಕ ರಸ್ತೆಯಲ್ಲಿ ಪೆರ್ಮುಡ ಕಡೆಯಿಂದ ಒಂದು ಸೂಪರ್ ಕ್ಯಾರಿ ಟರ್ಬೋ ವಾಹನ ನೋಂದಣಿ ಸಂಖ್ಯೆ ಕೆ ಎ 20 ಎಎ 5887 ನೇ ದನ್ನು ನಿಲ್ಲಿಸಿ ತಪಾಸಣೆ ನಡೆಸುವ ಸಮಯ ಆರೋಪಿತರುಗಳು ಯಾವುದೇ ಪರವಾಣಿಗೆ ಇಲ್ಲದೇ ಅಕ್ರಮವಾಗಿ ಗೋವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ 3 ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿ ಸ್ವಾದೀನಪಡಿಸಿದ್ದಾರೆ. ಸ್ವಾಧೀನಪಡಿಸಿದ 3 ಜಾನುವಾರುಗಳ ಅಂದಾಜು ಮೌಲ್ಯ 15 ಸಾವಿರ ಹಾಗೂ ವಾಹನದಅಂದಾಜು ಮೌಲ್ಯ 2 ಲಕ್ಷ ವಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸ್ಟಾರ್ ಲೈನ್ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

Suddi Udaya

ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ಪೋಷಕರಿಂದ ಶ್ರಮದಾನ 

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ವೇಣೂರು: ಬಜಿರೆಯಲ್ಲಿ ಮನೆಯ ಬಾವಿ ತಡೆಗೋಡೆ ಕುಸಿತ

Suddi Udaya

ಕರಾಟೆ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ. ಮಾ. ಶಾಲೆಯ ವಿದ್ಯಾರ್ಥಿ ಯಶಸ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya
error: Content is protected !!