ಮಲೆಕುಡಿಯ ಸಮುದಾಯ ಕುಕ್ಕೆ ಮತ್ತು ಲಿಂಗ ಎಂಬ ದೈವಿ ಪುರುಷರಿಂದ ಸ್ಥಾಪಿಸಲ್ಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮರಥ ಕಟ್ಟುವುದರಿಂದ ಹಿಡಿದು ಪಂಚ ಪರ್ವ ಸೇವೆಗಳಲ್ಲಿ ಕೂಡ ಮಲೆಕುಡಿಯ ಸಮುದಾಯದವರು ಭಕ್ತಿ ಶ್ರದ್ಧೆಯಿಂದ ಸೇವೆಯನ್ನು ಮಾಡುತ್ತಿದ್ದು. ಪ್ರತಿ ಬಾರಿಯೂ ಮಲೆಕುಡಿಯ ಸಮುದಾಯಕ್ಕೆ ಆಡಳಿತ ಮಂಡಳಿಯಲ್ಲಿ ಒಂದು ಸ್ಥಾನವನ್ನು ನೀಡಲಾಗುತ್ತಿತ್ತು.
ಪ್ರಸ್ತುತ ಮಾನ್ಯ ಉಸ್ತುವಾರಿ ಸಚಿವರು ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿ ಮಲೆಕುಡಿಯ ಸಮುದಾಯದವರ ಹೆಸರು ಇಲ್ಲದೆ ಇರುವುದು ಆಘಾತವನ್ನುಂಟು ಮಾಡಿದೆ . ಸಂಬಂಧ ಪಟ್ಟ ಇಲಾಖೆ ಮತ್ತು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮಲೆಕುಡಿಯ ಸಮುದಾಯದವರಿಗೆ ಒಂದು ಸ್ಥಾನವನ್ನು ಕೊಡಬೇಕು. ಒಂದು ವೇಳೆ ಸಮುದಾಯವನ್ನು ಕಡೆಗಣಿಸಿ ಸರ್ಕಾರ ನಮ್ಮ ಭಾವನೆಗಳಿಗೆ ಘಾಸಿಗೊಳಿಸುವ ಪ್ರಯತ್ನವನ್ನು ಮಾಡಿದರೆ. ಕ್ಷೇತ್ರದಲ್ಲಿ ಸಮುದಾಯ ಚಾಕರಿ ಮಾಡುವುದನ್ನು ನಿಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ಹಾಗೂ ಪ್ರಧಾನ ಕಾರ್ಯದರ್ಶಿ ಜಯೇಂದ್ರ ನಿಡ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.