27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಸ್ಟಾನ (ರಿ) ಪ್ರಾಯೋಜಿತ ಬಟ್ಟೆಯ ಕಸೂತಿ ಆರಿ ಕೌಶಲ್ಯ ಸ್ವ ಉದ್ಯೋಗ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ :ಬ್ಯಾಂಕ್ ಒಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, 15 ದಿನಗಳ ಬಟ್ಟೆ ಕಸೂತಿ ತಯಾರಿಕೆಯ(ಆರಿ ವರ್ಕ್ )ತರಬೇತಿಯ ಸಮಾರೋಪ ಕಾರ್ಯಕ್ರಮ ಕಲ್ಲೇರಿ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ತಾಪಕರಾದ ಜೀವನ್ ಕೊಲ್ಯ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಮಾಹಿತಿ ನೀಡಿದರು.ಬಹಳ ನಾಜುಕಾದ ತರಬೇತಿಯನ್ನು ಉತ್ತಮ ಮಟ್ಟದಲ್ಲಿ ಪಡೆದ ಮಹಿಳೆಯರಿಗೆ ಹುರಿದುಂಬಿಸಿ ಮುಂದೆ ಹೆಚ್ಚಿನ ಕೌಶಲ್ಯ ಪಡೆಯಲು ಪ್ರೇರೇಪಿಸಿದರು. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲ್ಲೇರಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾದ ಜಯರಾಜ್ ಜೈನ್ ಇವರು ಮಹಿಳೆಯರು ಸಣ್ಣ ಅವಧಿಯಲ್ಲಿ ಹೆಚ್ಚಿನ ಕೌಶಲ್ಯ ದ ತರಬೇತಿ ಪಡೆದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ತರಬೇತಿ ಪಡೆದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಲ್ಲೇರಿ ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಪ್ರಮಿಳಾ, ತರಬೇತುದಾರರಾದ ಶುಭ ಲಕ್ಷ್ಮಿ, ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ಉಪಸ್ಥಿತರಿದ್ದರು.ಕಲ್ಲೇರಿ ಗ್ರಾಮ ವ್ಯಾಪ್ತಿಯ ಸುತ್ತ ಮುತ್ತ ಊರಿನ ಸುಮಾರು 22 ಮಹಿಳೆಯರು ಈ 15 ದಿವಸದ ತರಬೇತಿ ಪಡೆದು ಪ್ರಮಾಣ ಪತ್ರವನ್ನು ಪಡೆದರು.ಸ್ನೇಹಾ ಭಟ್ ಕಾರ್ಯಕ್ರಮ ನಿರೂಪಿಸಿ,ಸುಮಲತಾ ಇವರು ಸ್ವಾಗತಿಸಿದರು, ಶಿಲ್ಪಾ ಇವರು ಧನ್ಯವಾದಗೈದರು

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ದೀಪಾವಳಿ ಸಂಭ್ರಮ

Suddi Udaya

ಶ್ರೀ ಕ್ಷೇ. ಧ. ಗ್ರಾ. ಯೋ. ವತಿಯಿಂದ ಮುಂಗಾರು ಯಾಂತ್ರಿಕ್ರತ ಭತ್ತ ಬೇಸಾಯ ಕ್ಕೆ ಚಾಲನೆ

Suddi Udaya

ಮಚ್ಚಿನ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ನಾರಾಯಣ ಶೆಟ್ಟಿ ಆಯ್ಕೆ

Suddi Udaya

ವೇಣೂರು ಐಟಿಐಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಸೋಮಂತಡ್ಕದಲ್ಲಿ ರಾಮನಾಮ ಸಂಕೀರ್ತನೆ ಕಾರ್ಯಕ್ರಮ: ಕರಸೇವಕ ಸುರೇಶ್ ಭಟ್ ಕೊಲ್ಯ ರವರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿಯಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ : ಶ್ರೀ ಗಣೇಶೋತ್ಸವಕ್ಕೆ ಆಮಂತ್ರಿಸಿದ ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್

Suddi Udaya
error: Content is protected !!