ಬಳಂಜ: ಇತಿಹಾಸ ಪ್ರಸಿದ್ದ ಶ್ರೀ ಪಂಚಲಿಂಗೇಶ್ವರ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ನಡ್ಡಂತಾಡಿ ವೇದಮೂರ್ತಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಮಾ.30 ರಿಂದ ಎ.6 ರವರೆಗೆ ವಿವಿಧ ವೈದಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಶ್ರೀ ಪಂಚಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್ ತಿಳಿಸಿದ್ದಾರೆ.
ಮಾ.30 ರಂದು ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಸಮರ್ಪಣೆ, ತೋರಣ ಮುಹೂರ್ತ, ಅನ್ನ ಸಂತರ್ಪಣೆ, ನಿತ್ಯ ಬಲಿ ಉತ್ಸವ, ವಸಂತಕಟ್ಟಿ ಪೂಜೆ, ಮಹಾಪೂಜೆ ಜರುಗಲಿದೆ. ಮಾ.31 ರಂದು ಉತ್ಸವ, ಮಹಾಪೂಜೆ, ನಿತ್ಯಬಲಿ ಜರುಗಲಿದೆ. ಎ.1ರಂದು ಸ್ವಸ್ತಿ ಪುಣ್ಯಾಹವಾಚನ, ಕಲಶಾರಾಧನೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಉತ್ಸವ, ಮಹಾಪೂಜಿ, ನಿತ್ಯಬಲಿ ಜರುಗಲಿದೆ.
ಎ.2ರಂದು ಕಲಶಾರಾಧನೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಉತ್ಸವ, ಮಹಾಪೂಜೆ, ನಿತ್ಯ ಬಲಿ ಜರುಗಲಿದೆ. ಎ.3 ರಂದು ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಬಳಂಜ ಶ್ರೀ ಪಂಚಶ್ರೀ ಮಕ್ಕಳ ಕುಣಿತ ಭಜನಾ ಮಂಡಳಿ ಹಾಗೂ ಬಳಂಜ ನಾಲ್ಕೂರು ಪಂಚಶ್ರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ. ರಾತ್ರಿ ಉತ್ಸವ ಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವಸಂತಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ ಜರುಗಲಿದೆ. ಎ.4ರಂದು ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಉತ್ಸವ ಬಲಿ, ವಸಂತಕಟ್ಟಿ ಪೂಜೆ, ಮಹಾಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ, ಕವಾಟ ಬಂಧನ ಜರುಗಲಿದೆ.
ಎ.5 ರಂದು ‘ದಿವ್ಯದರ್ಶನ’ ದಶವಿಧ ಸ್ನಾನ, ಪಂಚಾಮೃತ ಅಭಿಷೇಕ, ಕಲಶ ಅಭಿಷೇಕ, ಅಲಂಕಾರಪೂಜೆ, ಮಹಾಪೂಜೆ, ಚೂರ್ಣೋತ್ಸವ, ಪಲ್ಲಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಸ್ವಾತಿ ಮ್ಯೂಸಿಕಲ್ಸ್ ಕಾರ್ಯಾಣ ಇವರಿಂದ ಹರಿನಾಮ ಸಂಕೀರ್ತನೆ, ಬೊಳ್ಳಾಜೆ ಬ್ರಹ್ಮಶ್ರೀ ಭಜನಾ ಮಂಡಳಿ ಇವರಿಂದ ಭಜನಾ ಸೇವೆ. ರಾತ್ರಿ ಬಳಂಜ ಗುತ್ತುವಿನಿಂದ ದೈವಗಳ ಭಂಡಾರ ಬರುವುದು. ಉತ್ಸವ ಬಲಿ, ವಸಂತಕಟ್ಟೆ ಪೂಜೆ, ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವ ಮತ್ತು ದೇವರ ಭೇಟಿ, ಶ್ರೀ ದೇವರ ಅವಕೃತ, ಧ್ವಜಅವರೋಹಣ, ಮಹಾಪೂಜೆ.
ಬಳಂಜ ಶ್ರೀ ಪಂಚಲಿಂಗೇಶ್ವರ ಹವ್ಯಾಸಿ ಯಕ್ಷಗಾನ ತರಬೇತಿ ಕೇಂದ್ರ ಇವರಿಂದ ಶ್ರೀ ರಾಮ ದರ್ಶನ ಯಕ್ಷಗಾನ ಬಯಲಾಟ, ಕಾರ್ಕಳ ‘ಡೆನ್ನಾನ ಕಲಾವಿದೆರ್ ಬಲೆ ತೆಲಿಪಾಲೆ, ಬಲೆ ಖುಲಿಪಾಲೆ ಖ್ಯಾತಿಯ ಪ್ರಶಾಂತ್ ಶೆಟ್ಟಿ ಪರಪ್ಪಾದೆ ಅಭಿನಯದ ‘ಡೆನ್ನಾನ’ (ಒಂಜಿ ಇಲ್ಲದ ಕಥೆ) ತುಳು ಜಾನಪದ ಶೈಲಿಯ ಹಾಸ್ಯ ನಾಟಕ ಜರುಗಲಿದೆ.
ಎ.೬ ರಂದು ಮಹಾಪೂಜೆ, ಮಹಾಮಂತ್ರಾಕ್ಷತೆ, ರಾತ್ರಿ ಹಂದ್ಲಾಯಿ ದೈವಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಲಿದೆ.