
ಚಿತ್ರ: ಸಂಗ್ರಹ
ಬೆಳ್ತಂಗಡಿ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಬ್ಯಾಂಕ್ ಆಫ್ ಬರೋಡಾ ಬೆಳ್ತಂಗಡಿ, ವೈಭವ್ ಹಾರ್ಡ್ವೇರ್ ಗುರುವಾಯನಕೆರೆ, ವಾಣಿ ಶಿಕ್ಷಣ ಸಂಸ್ಥೆ, ಸೈಂಟ್ ಮೇರಿಸ್ ಶಾಲೆ ಲಾಯಿಲ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆ, ಪ್ರಸನ್ನ ಆಯುರ್ವೇದ ಕಾಲೇಜು ಲಾಯಿಲ, ಸುದ್ದಿ ಉದಯ ವಾರಪತ್ರಿಕೆ, ಬೆಳ್ತಂಗಡಿ ಮೀಡಿಯಾ ಕ್ಲಬ್, ರೂಪಾ ಕ್ಯಾಟರರ್ಸ್, ರಿವಾ ವಾಟರ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಸರಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ “ಮೆಗಾ ANTI – DRUG ವಾಕಥಾನ್” ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೊಲೀಸರು ಮತ್ತು ನಾಗರಿಕರಿಂದ ನಡಿಗೆಯು ಮಾ.29 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಸಂತೆಕಟ್ಟೆ ಮಂಜುನಾಥ ಕಲಾಭವನದವರೆಗೆ ವಾಕಥಾನ್ ನಡೆಯಲಿದೆ.
ದ ಕ ಜಿಲ್ಲೆ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಐಪಿಎಸ್ ಭಾಗವಹಿಸಲಿದ್ದಾರೆ.