ಮೇಲಂತಬೆಟ್ಟು : ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಮೇಲಂತಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯನ್ನು ಮಾ. 27ರಂದು ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸರ್ಕಾರದಿಂದ ವಿಶೇಷ ಚೇತನ ವ್ಯಕ್ತಿಗಳಿಗೆ ಸಿಗುವ ಸೌಲಭ್ಯ ಗಳ ಬಗ್ಗೆ ಸೂಕ್ತ ಮಾಹಿತಿಯನ್ನು ತಾಲೂಕು ಸಂಯೋಜಕ ಜಾನ್ ಬ್ಯಾಪಿಸ್ಟ್ ಡಿಸೋಜಾ ಇವರು ನೀಡಿದರು.

ವಿಕಲಚೇತನರ ಸ್ನೇಹ ವಾತಾವರಣ ಹಾಗೂ ಸಮಾಜದಲ್ಲಿ ವಿಶೇಷ ಚೇತನರು ಯಾವ ರೀತಿ ಮುಂದೆ ಬರಬಹುದು ಎನ್ನುವ ಮಾಹಿತಿಯನ್ನು ನಗರ ಪಂಚಾಯತ್ ಸಂಯೋಜಕಿ ಫೌಝಿಯಾ ನೀಡಿರುತ್ತಾರೆ.
ಈ ವೇಳೆ ಪಂಚಾಯಿತಿನ ಶೇಕಡ 5ರ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಈ ವಿಶೇಷ ಸಮನ್ವಯ ಗ್ರಾಮ ಸಭೆಗೆ ಪಂಚಾಯತ್ ನ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ವಲಯ ಮಟ್ಟದ ಸಿಹೆಚ್ ಒ ಭಾಗವಹಿಸಿದ್ದರು . ನಂತರ ವಿಶೇಷ ಚೇತನ ವ್ಯಕ್ತಿಗಳ ಆರೋಗ್ಯ ತಪಾಸಣೆಯು ಮಾಡಲಾಯಿತು.
ಪ್ರಭಾರ ಕಾರ್ಯ ನಿರ್ವಹಣಾ ಅಧಿಕಾರಿ ನಿರ್ಮಲ್ ಸ್ವಾಗತಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಗಣೇಶ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಇಂದಬೆಟ್ಟು ಪುನರ್ವಸತಿ ಕಾರ್ಯಕರ್ತರಾದ ಎಂ ಜೆ ಜೋಸೆಫ್ ಮತ್ತು ಬೆಳಾಲು ಪುನರ್ವಸತಿ ಕಾರ್ಯಕರ್ತರಾದ ಹೀರಣ್ಣ ಮಾಡಿದರು. ಪ್ರಭಾರ ಕಾರ್ಯನಿರ್ವಹಣಾ ಅಧಿಕಾರಿಯವರು ಧನ್ಯವಾದವಿತ್ತರು.