24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

ಮೇಲಂತಬೆಟ್ಟು : ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಮೇಲಂತಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯನ್ನು ಮಾ. 27ರಂದು ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸರ್ಕಾರದಿಂದ ವಿಶೇಷ ಚೇತನ ವ್ಯಕ್ತಿಗಳಿಗೆ ಸಿಗುವ ಸೌಲಭ್ಯ ಗಳ ಬಗ್ಗೆ ಸೂಕ್ತ ಮಾಹಿತಿಯನ್ನು ತಾಲೂಕು ಸಂಯೋಜಕ ಜಾನ್ ಬ್ಯಾಪಿಸ್ಟ್ ಡಿಸೋಜಾ ಇವರು ನೀಡಿದರು.

ವಿಕಲಚೇತನರ ಸ್ನೇಹ ವಾತಾವರಣ ಹಾಗೂ ಸಮಾಜದಲ್ಲಿ ವಿಶೇಷ ಚೇತನರು ಯಾವ ರೀತಿ ಮುಂದೆ ಬರಬಹುದು ಎನ್ನುವ ಮಾಹಿತಿಯನ್ನು ನಗರ ಪಂಚಾಯತ್ ಸಂಯೋಜಕಿ ಫೌಝಿಯಾ ನೀಡಿರುತ್ತಾರೆ.

ಈ ವೇಳೆ ಪಂಚಾಯಿತಿನ ಶೇಕಡ 5ರ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಈ ವಿಶೇಷ ಸಮನ್ವಯ ಗ್ರಾಮ ಸಭೆಗೆ ಪಂಚಾಯತ್ ನ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ವಲಯ ಮಟ್ಟದ ಸಿಹೆಚ್ ಒ ಭಾಗವಹಿಸಿದ್ದರು . ನಂತರ ವಿಶೇಷ ಚೇತನ ವ್ಯಕ್ತಿಗಳ ಆರೋಗ್ಯ ತಪಾಸಣೆಯು ಮಾಡಲಾಯಿತು.

ಪ್ರಭಾರ ಕಾರ್ಯ ನಿರ್ವಹಣಾ ಅಧಿಕಾರಿ ನಿರ್ಮಲ್ ಸ್ವಾಗತಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಗಣೇಶ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಇಂದಬೆಟ್ಟು ಪುನರ್ವಸತಿ ಕಾರ್ಯಕರ್ತರಾದ ಎಂ ಜೆ ಜೋಸೆಫ್ ಮತ್ತು ಬೆಳಾಲು ಪುನರ್ವಸತಿ ಕಾರ್ಯಕರ್ತರಾದ ಹೀರಣ್ಣ ಮಾಡಿದರು. ಪ್ರಭಾರ ಕಾರ್ಯನಿರ್ವಹಣಾ ಅಧಿಕಾರಿಯವರು ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ದಯಾ ವಿಶೇಷ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಹರೀಶ್ ಪೂಂಜ ಬೃಹತ್ ಗೆಲುವು: ನಾರಾವಿಯಲ್ಲಿ ವಿಜಯೋತ್ಸವ

Suddi Udaya

ಮರೋಡಿ-ಪೆರಾಡಿ ಗ್ರಾಮಗಳಲ್ಲಿ ಮಹಾಮಳೆಗೆ ಅನಾಹುತ, ಅಗತ್ಯ ಕ್ರಮ ಕೈಗೊಂಡ ಪಂಚಾಯತ್ ಆಡಳಿತ

Suddi Udaya

ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದಿಂದ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಕೊಡುಗೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲಂತಬೆಟ್ಟು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಪುಸ್ತಕ, ಬ್ಯಾಗ್ ವಿತರಣೆ

Suddi Udaya
error: Content is protected !!