ಬೆಳ್ತಂಗಡಿ: ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಗೊಂದಲವಿಲ್ಲದೆ ರೂಪಿಸಿಕೊಳ್ಳಲು ಅನುಗ್ರಹ ಟ್ರೈನಿಂಗ್ ಕಾಲೇಜ್, ಬೆಳ್ತಂಗಡಿ ವತಿಯಿಂದ “ಎಸ್.ಎಸ್.ಎಲ್.ಸಿ- ಪಿಯುಸಿ ನಂತರ ಏನು Next?” ಎಂಬ ಉಚಿತ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಎ.26 ರಂದು ಬೆಳ್ತಂಗಡಿ ಸಂತೆಕಟ್ಟೆ ಅನುಗ್ರಹ ಟ್ರೈನಿಂಗ್ ಕಾಲೇಜ್ ನಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಶ್ರೀ ರಾಮ ಕಾಂಪ್ಲೆಕ್ಸ್ ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಪಾಸಾದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು, ತಮ್ಮ ಮುಂದಿನ ವಿದ್ಯಾಭ್ಯಾಸ, ಉದ್ಯೋಗ ಅವಕಾಶಗಳು, ಹಾಗೂ ಉದ್ಯಮ ಆರಂಭಿಸುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.
ಶ್ರೇಷ್ಠ ವೃತ್ತಿ ಸಲಹೆಗಾರರು, ಶಿಕ್ಷಣ ತಜ್ಞರು ಮತ್ತು ಉದ್ಯೋಗ ತಜ್ಞರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಕಾರ್ಯಾಗಾರದಲ್ಲಿ ನೀವು ಪಡೆಯುವ ಮಾಹಿತಿಗಳು:
✅ SSLC | PUC ನಂತರ ಇರುವ ಎಲ್ಲ ಶೈಕ್ಷಣಿಕ ಹಾಗೂ ವೃತ್ತಿ ಆಯ್ಕೆಗಳ ಪರಿಚಯ
✅ ಅತ್ಯುತ್ತಮ ಡಿಪ್ಲೊಮಾ, ಡಿಗ್ರಿ, ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ಕೋರ್ಸ್‌ಗಳ ಬಗ್ಗೆ ಮಾಹಿತಿ
✅ ಸರಕಾರಿ ಹಾಗೂ ಖಾಸಗಿ ಉದ್ಯೋಗ ಅವಕಾಶಗಳು – ಯಾವುದಕ್ಕೆ ಹೇಗೆ ಅರ್ಜಿ ಹಾಕಬಹುದು?
✅ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – UPSC, KPSC, ಬ್ಯಾಂಕಿಂಗ್, SSC, ಪೊಲೀಸ್, ಡಿಫೆನ್ಸ್, ಎಕ್ಸೈಸ್ ಇತ್ಯಾದಿ
✅ ಶಿಕ್ಷಣ ಸಾಲ, ಸರ್ಕಾರಿ ಸಬ್ಸಿಡಿ, ವಿದ್ಯಾರ್ಥಿವೇತನ (Scholarship) ಕುರಿತು ಮಾಹಿತಿ
✅ ಭಾರತ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣದ ಅವಕಾಶಗಳು – ಹೇಗೆ ಪ್ರವೇಶ ಪಡೆಯಬಹುದು?
✅ ಸ್ವ ಉದ್ಯೋಗ, ಸ್ಟಾರ್ಟ್‌ಅಪ್, ಮತ್ತು ಉದ್ಯಮ ಆರಂಭಿಸಲು ಮಾರ್ಗದರ್ಶನ
✅ ಪೋಷಕರೊಂದಿಗೆ ವಿದ್ಯಾರ್ಥಿಗಳಿಗೆ ಇದೊಂದು ವಿಶೇಷ ಮಾರ್ಗದರ್ಶನ – ಮಕ್ಕಳ ಭವಿಷ್ಯ ಹೇಗೆ ರೂಪಿಸಬಹುದು?
🎙️ ನಿಮ್ಮೊಂದಿಗೆ ತಜ್ಞರು:
🔹ವೃತ್ತಿ ಸಲಹೆಗಾರರು – ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿ ಆಯ್ಕೆ ಬಗ್ಗೆ ಮಾರ್ಗದರ್ಶನ.
🔹 ಶಿಕ್ಷಣ ತಜ್ಞರು – ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿವೇತನಗಳ ಸಂಪೂರ್ಣ ಮಾಹಿತಿ.
🔹 ಉದ್ಯೋಗ ತಜ್ಞರು – ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ಬಗ್ಗೆ ವಿವರವಾದ ಮಾಹಿತಿ
🔹ಉಚಿತ ಪ್ರವೇಶ!
🔹ಸೀಮಿತ ಆಸನಗಳು – ಮುಂಗಡ ನೋಂದಣಿ ಕಡ್ಡಾಯ!
📞ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗೆ ಸಂಪರ್ಕಿಸಿ: 88611 12182
ವಿ.ಸೂ.: ಈ ಶಿಬಿರದಲ್ಲಿ ಭಾಗವಹಿಸಲು ಮುಂಗಡವಾಗಿ ಹೆಸರು ನೋಂದಾಯಿಸಿ ಪಾಸ್ ಪಡೆಯುವುದು ಕಡ್ಡಾಯ.