
ಕಿಲ್ಲೂರು: ಇತಿಹಾಸ ಪ್ರಸಿದ್ಧವಾದ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಸಂಶೀರ್ ಸಖಾಫಿ ಪರಪ್ಪು ಈದುಲ್ ಫಿತ್ರ್ ನ ಸಂದೇಶ ಭಾಷಣ ಮಾಡಿ ಈದ್ ನಮಾಝ್ ಗೆ ನೇತೃತ್ವ ನೀಡಿದರು. ಮಸ್ಜಿದ್ ಅಧ್ಯಕ್ಷ ಅಬ್ದುಲ್ ಅಝೀ ಝುಹ್ರಿ ರವರು ಅಸಂಶ ಭಾಷಣ ಮಾಡಿ ಶುಭಹಾರೈಸುದರೊಂದಿಗೆ ಮಾದಕ ದ್ರವ್ಯದ ಬಗ್ಗೆ ಯುವಕರಿಗೆ ಜಾಗೃತಿ ಮೂಡಿಸಿದರು.

ವರ್ಷಗಳ ಕಾಲ ಸೇವೆ ಮಾಡಿ ನಿರ್ಗಮಿಸುತ್ತಿರುವ ಸಂಶೀರ್ ಸಖಾಫಿ ಪರಪ್ಪು, ರಶೀದ್ ಮದನಿ ಇಂದಬೆಟ್ಟು, ಅಬ್ದುಲ್ ಸತ್ತಾರ್ ಸಖಾಫಿ ಯವರನ್ನು ಜಮಾಅತ್ ನವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಅದೇ ರೀತಿ ಪವಿತ್ರ ರಮಲಾನ್ ನಲ್ಲಿ 30 ದಿನಗಳು ತರವೀಹ್ ಮತ್ತು ಸುಬುಹಿ ನಮಾಝ್ ಗೆ ಬರುತ್ತಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಜಮಾಅತ್ ಅಧ್ಯಕ್ಷರ ವತಿಯಿಂದ ಸೈಕಲ್ ನೀಡಿ ಮಕ್ಕಳನ್ನು ಗೌರವಿಸಿದ್ದು ವಿಶೇಷವಾಗಿತ್ತು.

ಆಡಳಿತ ಕಮಿಟಿಯ ಉಪಾಧ್ಯಕ್ಷ ಸಾಹುಲ್ ಹಮೀದ್, ಕಾರ್ಯದರ್ಶಿ ಸಾಹುಲ್ , ಕೋಶಾಧಿಕಾರಿ ಮಲ್ಲಿಗೆ ಅಬೂಬಕ್ಕರ್, ಸದಸ್ಯರಾದ ಮುಹಮ್ಮದ್ ಎಮ್, ಹಂಝತ್ ಕಿಲ್ಲೂರು, ಹೆಚ್.ಎನ್ ಹನೀಫ್, ಬದ್ರುದ್ದೀನ್, ಮುಹಮ್ಮದ್ ಮಣ್ಣಗುಂಡಿ, ಅಶ್ರಫ್ ಶ್ರವಣಗುಂಡ, ಹನೀಫ್ ಮಲ್ಲಿಗೆ ಹಾಗೂ ಹಿರಿಯರಾದ ಕಾಸಿಮ್ ಮಲ್ಲಿಗೆ ಮನೆ, ಇಸ್ಮಾಯಿಲ್ ಫೈಝಿ, ಬಿಹೆಚ್ ಅಬೂಬಕ್ಕರ್ ಹಾಜಿ ಹಾಗೂ ಜಮಾಅತ್ ಹಿರಿಯರು, ಯುವಕರು, ಮಕ್ಕಳು ಭಾಗವಹಿಸಿ ಲೋಕ ಶಾಂತಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು.