26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಮಿತ್ರ ಯುವಕ ಮಂಡಲ ಅರಳಿ ಹಾಗೂ ಮಿತ್ರ ಮಹಿಳಾ ಮಂಡಳಿ ವತಿಯಿಂದ 27ನೇ ವರ್ಷದ ಪ್ರತಿಭಾ ಸಂಗಮ


ಉಜಿರೆ: ಅರಳಿ ಮಿತ್ರ ಯುವಕ ಮಂಡಲ ಮತ್ತು ಮಿತ್ರ ಮಹಿಳಾ ಮಂಡಳಿ ಅರಳಿ ಇದರ ಜಂಟಿ ಆಶ್ರಯದಲ್ಲಿ 27ನೇ ವರ್ಷದ ಪ್ರತಿಭಾ ಸಂಗಮವು ಡಿ.30 ರಂದು ಮಿತ್ರ ಯುವಕ ಮಂಡಲದ ರಂಗ ಮಂದಿರ ವೇದಿಕೆಯಲ್ಲಿ ನಡೆಯಿತು.
‌‌‌

ಮೊದಲಿಗೆ ಹೊಸದಾಗಿ ರಚನೆಗೊಂಡ ಶ್ರೀ ಬ್ರಹ್ಮಾದೇವರ ಭಜನಾ ತಂಡ ಅರಳಿ ಇವರ ಕುಣಿತ ಭಜನೆಯ ಮೂಲಕ ಆರಂಭವಾಗಿ, ಸಭಾ ಅಧ್ಯಕ್ಷತೆಯನ್ನು ಯುವರಾಜ್ ಅರಳಿ ಅಧ್ಯಕ್ಷತೆಯಲ್ಲಿ ಕೆ ಧನಂಜಯ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಷಾಕಿರಣ್ ಕಾರಂತ್, ಬಾಲಕೃಷ್ಣ ಕೊರಮೇರು, ಸದಾಶಿವ ಹೆಗಡೆ, ಸನ್ಮಾನಿತರಾಗಿ ಜಯಾನಂದ ಘಟಕಾಧಿಕಾರಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರು, ಚೇತನ್ ಅರಳಿ, ಶ್ರೀಮತಿ ಸರಳಾಕ್ಷಿ ಪುರುಷೋತ್ತಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ನಂತರ ಬಹುಮಾನ ವಿತರಣೆ ನಡೆಸಿ ರಾಜೇಶ್ ಶೈಕ್ಷಣಿಕ ವರದಿ ಮಂಡಿಸಿದರು.

ವತ್ಸಾಲ ಗೌಡ ಪ್ರೀತಿಯಿಂದ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ನಿಶಿತ್ ಬಂಗೇರ ನೆರವೇರಿಸಿ ಸಂತೋಷ್ ಸಾಲಿಯನ್ ಧನ್ಯವಾದವಿತ್ತರು.
ಊರಿನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗೆಂದಗಿಡಿ ಎಂಬ ವಿಶೇಷ ನಾಟಕ ಮೂಲಕ ಕಾರ್ಯಕ್ರಮ ನಡೆಯಿತು.

Related posts

ಗುಂಡೂರಿ: ಮುದ್ದಾಡಿ ನಿವಾಸಿ ಪುರಲ್ಲ ನಿಧನ

Suddi Udaya

ಮದ್ಯದ ಅಂಗಡಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Suddi Udaya

ಗುರುವಾಯನಕೆರೆ ಪಾಲಡ್ಕ ಒಕ್ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮ

Suddi Udaya

ಮುಂಡಾಜೆ ನಿವಾಸಿ ಜೇಮ್ಸ್‌ ಕಾರಿಮಲ ನಿಧನ

Suddi Udaya

ಕನ್ಯಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪಾಲೇದು ಗ್ರಾಮಸ್ಥರ ಸುಭಿಕ್ಷೆಗಾಗಿ ಪ್ರಶ್ನಾ ಚಿಂತನೆ

Suddi Udaya
error: Content is protected !!