ಬಾರ್ಯ : ಇಲ್ಲಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆಯು ಅಧ್ಯಕ್ಷ ಭಾಸ್ಕರ ಬಾರ್ಯ ನೇತ್ರತ್ವದಲ್ಲಿ ದೇವಳದ ಪ್ರಾಂಗಣದಲ್ಲಿ ನಡೆಯಿತು.
ಈ ವೇಳೆ 2025 ಫೆಬ್ರವರಿಯಲ್ಲಿ ಜರಗಿದ ಜಾತ್ರೆಯ ಆಯವ್ಯಯವನ್ನು ಮಂಡಿಸಲಾಯಿತು. ಏಪ್ರಿಲ್ 13 ರಂದು ಲೋಕಕಲ್ಯಾಣಕ್ಕಾಗಿ ದೇವಾಲಯದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಹೋಮ ಮತ್ತು ಧಾರ್ಮಿಕ ಸಭೆ ನಡೆಸುವುದೆಂದು ನಿರ್ಧರಿಸಲಾಯಿತು.
ದೇವಳ ಆಡಳಿತ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ , ಉಪಾಧ್ಯಕ್ಷ ನಾರಾಯಣ ಗೌಡ ಮೂರುಗೋಳಿ , ಕೋಶಾಧಿಕಾರಿ ಸೇಸಪ್ಪ ಸಾಲಿಯಾನ್ , ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ , ಅರ್ಚಕ ಗುರುಪ್ರಸಾದ್ ನೂರಿತ್ತಾಯ ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.