ಕುವೆಟ್ಟು: ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವವು ಮಾ. 30 ರoದು ಜರಗಿತು.
ಸಂಜೆ ರಘುರಾಮ್ ಭಟ್ ಮಠ ಇವರ ಮನೆಯಿಂದ ದೈವದ ಭಂಡಾರದ ಮೆರವಣಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮದ್ದಡ್ಕ ಇವರ ವಿಶೇಷವಾಗಿ ಸುಡು ಮದ್ದಿನ ಪ್ರದರ್ಶನದೊಂದಿಗೆ ದೈವಸ್ಥಾನಕ್ಕೆ ಭಂಡಾರ ಬಂದು ಪರ್ವ ಸೇವೆ ಭಕ್ತರಿಗೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ , ನಂತರ ದೈವದ ನೇಮೋತ್ಸವ ಜರಗಿತು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ಮೋಹನ್ ಕೆರ್ಮುಣ್ಣಾಯ ಮೈರಾರು ಮನೆ, ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮೂಡುಮನೆ, ರಘುರಾಮ್ ಭಟ್ ಅಸ್ರಣ್ಣರು ಮಠ ಮನೆ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಅನಂತ ಎಸ್ ಇರ್ವತ್ರಾಯ ತಂಗೋಯಿ ಇವರ ರಚನೆಯ ಬ್ರಹ್ಮದಂಡ ತುಳು ನಾಟಕ ಪ್ರದರ್ಶನಗೊಂಡಿತು.