ಮುಂಡಾಜೆ: ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರೂ. 3 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಫುಟ್ಬಾಲ್ ಕ್ರೀಡಾಂಗಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಮಾ.31ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ, ಉಪಾಧ್ಯಕ್ಷೆ ಸುಮಲತಾ ಶೆಟ್ಟಿ, ಸದಸ್ಯರು, ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ರಂಜಿನಿ ರವಿ, ತಾ.ಪಂ. ಮಾಜಿ ಸದಸ್ಯರಾದ ಕೊರಗಪ್ಪ ಗೌಡ ಅರಣಪಾದೆ, ಲೀಲಾವತಿ, ಮುಂಡಾಜೆ ಪ್ಯಾಕ್ಸ್ ನಿರ್ದೇಶಕರಾದ ಕಜೆ ವೆಂಕಟೇಶ್ವರ ಭಟ್, ಅಶ್ವಿನಿ ಎ. ಹೆಬ್ಬಾರ್, ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್, ಹಿರಿಯರಾದ ಅಡೂರು ವೆಂಕಟ್ರಾಯ, ಗೋಪಾಲಕೃಷ್ಣ ರಾವ್ ಅಡೂರು, ಶಾಲೆಯ ಪ್ರಿನ್ಸಿಪಾಲ್ ಮುರಳೀಧರ, ಗುತ್ತಿಗೆದಾರ ಕಂಪನಿಯ ಅವಿನಾಶ್ ಹೈದರಾಬಾದ್ ಮತ್ತಿತರರು ಉಪಸ್ಥಿತರಿದ್ದರು.
ಮುಂಡಾಜೆ ಪ್ಯಾಕ್ಸ್ ನಿರ್ದೇಶಕ ಚೆನ್ನಕೇಶವ ಅರಸಮಜಲು ಕಾರ್ಯಕ್ರಮ ನಿರೂಪಿಸಿದರು.
ಗ್ರಾಪಂ ಸದಸ್ಯೆ ರಂಜಿನಿ ವಂದಿಸಿದರು.