ಅಳದಂಗಡಿ : ಎ.12 ರಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಎದುರು ಮೈದಾನದಲ್ಲಿ ನಡೆಯುವ ಹನುಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ತಾಲೂಕು ಸಂಸ್ಕಾರ ಭಾರತೀ ಅಧ್ಯಕ್ಷರಾದ ಸಂಪತ್.ಬಿ.ಸುವರ್ಣ ಸೇರಿದಂತೆ, ಹನುಮೋತ್ಸವ ಸಮಿತಿಯ ಪ್ರಧಾನ ಸಂಚಾಲಕರು, ಸಂಚಾಲಕರು, ಸಹ ಸಂಚಾಲಕರು, ಗೌರವ ಸಲಹೆಗಾರರು, ವಿವಿಧ ಸಮಿತಿಗಳ ಪ್ರಮಖರು, ಗ್ರಾಮ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.