ಬೆಳ್ತಂಗಡಿ: ವೆಲ್ ಕಂ ಮದ್ದಡ್ಕ ಇದರ ಆಶ್ರಯದಲ್ಲಿ ಶಾಂತಿಗಾಗಿ ಕ್ರೀಡೆ, ಸೌಹಾರ್ದತೆಗಾಗಿ ಕ್ರೀಡೆ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಎ. 5 ಮತ್ತು 6ರಂದು ಮದ್ದಡ್ಕ ಸಬರಬೈಲು ಕುವೆಟ್ಟು ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ವೆಲ್ ಕಂ ಮದ್ದಡ್ಕ ಇದರ ಗೌರವ ಸಲಹೆಗಾರ ಹಾರಿಸ್ ಹೆಚ್. ಎಸ್. ಹೇಳಿದರು. ಅವರು ಮಾ. 31ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

2016 ರಲ್ಲಿ ಪ್ರಾರಂಭ ಮಾಡಿದ ಈ ಕ್ರೀಡಾ ಕೂಟ ಹಗಲು ನಡೆಯುತ್ತಿತ್ತು ಈ ವರ್ಷ ಹೊನಲು ಹಗಲು ಮತ್ತು ಹೊನಲು ಬೆಳಕಿನಲ್ಲಿ ನಡೆಯಲಿದೆ. ಮದ್ದಡ್ಕ ಅಸೂಪಾಸಿನ ಆಟಗಾರರಿಗೆ ಮಾತ್ರ ಅವಕಾಶ ಇದ್ದು ಊರಿನ 10 ಬಿಡ್ಡಿಂಗ್ ತಂಡ ಗಳಾದ ಹೆಚ್. ಎಸ್. ಫ್ಯಾಮಿಲಿ ಮದ್ದಡ್ಕ, ಎನ್. ಎನ್. ಸ್ಟೈ ಕರ್ಸ್, ಚಾಲೆಂಜ್ ನೇರಳಕಟ್ಟೆ, ಯು. ಆರ್. ಅಟ್ಯಾಕರ್ಸ್, ಎ. ಜೆ. ಮದ್ದಡ್ಕ, ನಮನ ಫ್ರೆಂಡ್ಸ್ ಸಬರಬೈಲು, ಇಶಾಮ್ ಬ್ರದರ್ಸ್, ಸದೀಮ್ ವಾರಿಯರ್ಸ್ ಮದ್ದಡ್ಕ, ಆರ್. ಬಿ. ಬ್ರದರ್ಸ್ ಮದ್ದಡ್ಕ, ಮಾನ್ ಸುನ್ ಕ್ರಿಕೇಟರ್ಸ್ ಮದ್ದಡ್ಕ ಪಂದ್ಯಾಟದಲ್ಲಿ ಭಾಗವಹಿಸಲಿದೆ.
ವಿಶೇಷ ಆಕರ್ಷಣೆಯಾಗಿ ಮಂಗಳೂರಿನ ಪ್ರತಿಷ್ಠಿತ ತಂಡವಾದ ಎನ್. ಎಂ ಮತ್ತು ಕೆ.ಜಿ.ಎಫ್. ಮಂಗಳೂರು ತಂಡಗಳ ನಡುವೆ ಜಿದ್ದಾಜಿದ್ದಿನ ಚಾಂಪಿಯನ್ ಟ್ರೋಫಿ ನಡೆಯಲಿದೆ. ಬೆಳಿಗ್ಗೆ ಮದ್ದಡ್ಕ ವೇದಾಶ್ರಮದ ರತ್ನಾ ಕರ ಭಟ್ ಕ್ರೀಡಾಂಗಣ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಸಚಿವ ಗಂಗಾಧರ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಗೇರ ಬಿಗ್ರೇಡ್ ಅಧ್ಯಕ್ಷೆ ಬಿನುತಾ ಬಂಗೇರ ಭಾಗವಹಿಸಲಿದ್ದಾರೆ ಎಂದರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ವಿಧಾನ ಸಭಾ ಅಧ್ಯಕ್ಷ ಯು. ಟಿ. ಖಾದರ್, ವಸತಿ, ವಕ್ಷಾ, ಅಲ್ಪ ಸಂಖ್ಯಾತ ಕಲ್ಯಾಣ ಸಚಿವ ಬಿ. ಝಡ್. ಝಮೀರ್ ಅಹಮ್ಮದ್, ಶಾಸಕ ಹರೀಶ್ ಪೂಂಜಾ, ಬೆಂಗಳೂರು ವಿಜಯ ನಗರ ಶಾಸಕ ಎಂ. ಕೃಷ್ಣಪ್ಪ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ರಮಾನಾಥ್ ರೈ, ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಜಿ. ಎ. ಬಾವ ವಿಶೇಷ ಅತಿಥಿಯಾಗಿ ಕಿರಣ್ ಚಂದ್ರ ಪುಷ್ಪಗಿರಿ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ವೆಲ್ ಕಮ್ ಮದ್ದಡ್ಕ ಗೌರವ ಸಲಹೆ ಗಾರ ರಾದ ಜೈರ್ ವಿನ್, ಉಬೈದ್, ಅಧ್ಯಕ್ಷ ಶಬೀರ್ ಮದ್ದಡ್ಕ, ಪ್ರಧಾನ ಕಾರ್ಯದರ್ಶಿ ಫಯಝ, ಪದಾಧಿಕಾರಿಗಳಾದ ಸಾದಿಕ್ ಷಾ, ರಮುಲ ಸಬರಬೈಲು, ಸೈಯಾಝ ಎ. ಜೆ. ಉಪಸ್ಥಿತರಿದ್ದರು.