April 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೀಯಾರು ಕೆಮ್ಮಟ್ಟೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ ಯುನಿಸೆಫ್ ಹೈದರಾಬಾದ್ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ನೀರು ಉಳಿಸಿ ಮಹಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಶುದ್ಧ ನೀರು ಯಾಕೆ ಬೇಕು,ನೀರಿನ ನಿರ್ವಹಣೆಯ ಅವಶ್ಯಕತೆ ಏಕೆದೆ, ಪ್ರಸ್ತುತ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ನೀರಿನ ಪರಿಸ್ಥಿತಿ ಹೇಗಿದೆ,ನೀರಿನ ಸಂರಕ್ಷಣೆಯಲ್ಲಿ ನಮ್ಮ ಹೊಣೆಗಾರಿಕೆ ಏನು,ನಾವು ಸಣ್ಣ ಮಟ್ಟದಲ್ಲಿ ಹೇಗೆ ನೀರನ್ನು ಉಳಿತಾಯ ಮಾಡಬಹುದು ಎನ್ನುವ ವಿಚಾರವಾಗಿ ವಲಯ ಮೇಲ್ವಿಚಾರಕರಾದ ಚಿತ್ತರಂಜನ್ ರವರು ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.

ಮನೆಯಲ್ಲಿ ಇಂಗು ಗುಂಡಿಯನ್ನು ನಿರ್ಮಾಣ ಮಾಡಿ ಮನೆಯ ಸುತ್ತಮುತ್ತಲಿನ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು.
ಸಮುದಾಯದ ಭಾಗಗಳಲ್ಲಿ ಇಂಗು ಗುಂಡಿ ನಿರ್ಮಿಸಿ, ಆ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು.
ಟ್ಯಾಪ್ ತೋರದಂತೆ ನೋಡಿಕೊಳ್ಳುವುದು, ಮನೆಯಲ್ಲಿ ಹಲ್ಲುಜ್ಜುವಾಗ,ಸೇವಿಂಗ್ ಮಾಡುವಾಗ, ಸ್ನಾನ ಮಾಡುತ್ತಿರುವಾಗ ಟ್ಯಾಪಿನಲ್ಲಿ ನಿರಂತರವಾಗಿ ನೀರು ಸೋರದಂತೆ ನೋಡುತ್ತಿರುವುದು, ಗಿಡಗಳಿಗೆ ಯಥೇಚ್ಛವಾಗಿ ನೀರು ನೀಡದೆ ಇರುವುದು ಈ ರೀತಿಯಾಗಿ ನಾವು ನೀರನ್ನು ಉಳಿಕೆ ಮಾಡಬಹುದು ಎಂದು ತಿಳಿಸಲಾಯಿತು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಅಪೂರ್ವ ಜೈನ್ ರವರು ಪರಿಸರದ ಸಂರಕ್ಷಣೆಯೊಂದಿಗೆ ನೀರು ಉಳಿಸುವುದು ಇಂದಿನ ದಿನದಲ್ಲಿ ಅನಿವಾರ್ಯವಾಗಿದೆ ಎಂದು ತಿಳಿಸಿದರು, ಪದಾಧಿಕಾರಿಯಾದ ನಿತಿನ್ ,ನವೀನ್ ಸೇವಾಪ್ರತಿನಿಧಿ ಚೈತ್ರ, ನವ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು..

Related posts

ನಾವೂರು: ನಮನ ಟ್ರೇಡರ್‍ಸ್ ಶುಭಾರಂಭ

Suddi Udaya

ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ: ದರ್ಶನ ಬಲಿ, ಬಟ್ಟಲು ಕಾಣಿಕೆ

Suddi Udaya

ಅಳದಂಗಡಿ:ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿಕಟಪಾಡಿ: ಕಿರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

Suddi Udaya

ಚಿಬಿದ್ರೆ ಪರವಾನಿಗೆ ಇಲ್ಲದೆ ಮರ ಕಡಿದು ಸಾಗಾಟಕ್ಕೆ ಯತ್ನ :ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ಮರ ಮತ್ತು ಕಟ್ಟಿಗೆಗಳ ವಶ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಕುವೆಂಪುರವರ ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ