26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ 2 ಸ.ಉ. ಹಿ. ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಉಚಿತ ದಂತ ತಪಾಸಣೆ

ಕನ್ಯಾಡಿ : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕನ್ಯಾಡಿ 2 ಶಾಲೆಯಲ್ಲಿ ಬಂಟರಯಾನೆ ನಾಡವರ ಸಂಘ, ಬಂಟರ ಮಹಿಳಾ ವಿಭಾಗ ಬೆಳ್ತಂಗಡಿ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು, ರೋಟರಿ ಆನ್ಸ್ ಕ್ಲಬ್ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಶಾಲೆಯಲ್ಲಿ ಏರ್ಪಡಿಸಿದ ಬೇಸಿಗೆ ಶಿಬಿರದ ಪ್ರಯುಕ್ತ ” ಉಚಿತ ದಂತ ತಪಾಸಣೆ ” ನಡೆಯಿತು.

ಕಾರ್ಯಕ್ರಮದಲ್ಲಿ ಡಾ| ಆಶಾ ರಾಘವೇಂದ್ರ ಪಿದಮಲೆ, ಬೆಳ್ತಂಗಡಿ, ಡಾ. ದೀಪಾಲಿ ಡೋಂಗ್ರೆ ಉಜಿರೆ, ಡಾ| ಹರ್ಷ ಉಜಿರೆ, ಡಾ| ಸೂರಾಜ್ ಭಟ್ ಉಜಿರೆ, ಡಾ| ತುಫೈಲ ಉಜಿರೆ ಉಪಸ್ಥಿತರಿದ್ದರು.

ಹಲ್ಲಿನ ಸುರಕ್ಷತೆಯ ಬಗ್ಗೆ ಡಾ| ದೀಪಾಲಿ ಡೋಂಗ್ರೆಯವರು ಮಾಹಿತಿಯನ್ನು ನೀಡಿದರು.

ಈ ವೇಳೆ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪುಷ್ಪಾ ಎನ್ ಇವರು “ಸೈನಿಕರಿಲ್ಲದ ದೇಶವನ್ನು ಊಹಿಸಲು ಸಾಧ್ಯವಿಲ್ಲ ಅದೇ ರೀತಿ ವೈದ್ಯರು ಜೀವ ರಕ್ಷಕರು” ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಉಷಾ ಶಶಿಧರ್ ಶೆಟ್ಟಿ ” ಮಕ್ಕಳು ಮತ್ತು ಪೋಷಕರ ನಡುವಿನ ಮೊಬೈಲ್ ಪಾತ್ರ ” ಕುರಿತು ಮಕ್ಕಳಿಗೆ ಮೊಬೈಲ್ ನಿಮ್ಮ ಜೀವನಕ್ಕೆ ಮುಳುವಾಗದಿರಲಿ ಮಕ್ಕಳೇ ಎನ್ನುತ್ತಾ , ಅದರ ಬಳಕೆಯ ಪರಿಣಾಮ ಮತ್ತು ದುಷ್ಪರಿಣಾಮವನ್ನು ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಾವತಿ, ಬಂಟರ ಮಹಿಳಾ ವಿಭಾಗ ಬೆಳ್ತಂಗಡಿ ಇದರ ಸದಸ್ಯೆ ಶ್ರೀಮತಿ ಪವಿತ್ರ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದುಕೊಂಡರು. ಮುಖ್ಯ ಶಿಕ್ಷಕರಾದ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಅರ್ಚನಾ ಧನ್ಯವಾದವಿತ್ತರು. ಸಹ ಶಿಕ್ಷಕ ನಾಗರಾಜ್ ಕಾರ್ಯಕ್ರಮದ ನಿರೂಪಿಸಿದರು.

Related posts

ಅಸ್ವಸ್ಥಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶೌರ್ಯ ತಂಡದ ಸದಸ್ಯರು

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ರಿಕ್ಷಾ ಬಾಡಿಗೆ ದರ ಪರಿಷ್ಕರಣೆ ಹಾಗೂ ಎಲ್.ಪಿ.ಜಿ/ಸಿ.ಎನ್.ಜಿ. ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಬಳಂಜ ಶಾಲೆಯಲ್ಲಿ ಕಾರ್ಯಾಗಾರ

Suddi Udaya

ಉಜಿರೆ ಡಾ| ಅನಿತಾ ದಯಾಕರ್ ರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Suddi Udaya
error: Content is protected !!