23.2 C
ಪುತ್ತೂರು, ಬೆಳ್ತಂಗಡಿ
April 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕರಾಟೆ ತರಬೇತಿ

ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಒಂದಾದ ಕರಾಟೆ ತರಬೇತಿಯ ವಿದ್ಯಾರ್ಥಿಗಳಿಗೆ ಬೆಲ್ಟ್ ಪ್ರಮೋಷನ್ ಪರೀಕ್ಷೆಯು ಶಾಲಾ ಆವರಣದಲ್ಲಿ ನಡೆಸಲಾಗಿದ್ದು, ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪಠ್ಯೇತರ ಚಟುವಟಿಕೆಗಳ ಸಂಯೋಜಕ ಶಿಕ್ಷಕಿ ಶ್ರೀಮತಿ ಮಾಲಿನಿ ಜೈನ್ “ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಿಂದ ಮಾನಸಿಕ ಹಾಗೂ ಬೌಧಿಕ ಬೆಳವಣಿಗೆ ಉತ್ತಮಗೊಳ್ಳುವುದು” ಎಂದು ಹಿತನುಡಿದು, ಸ್ಪರ್ಧೆಗಳಿಗೆ ತಯಾರಾಗುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸೀನಿಯರ್ ಬೆಲ್ಟ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕರಾಟೆ ಮುಖ್ಯ ತರಬೇತಿಗಾರ ಸೆನ್ಸಾಯಿ ವಸಂತ.ಕೆ ಬಂಗೇರ ಕರಾಟೆಯಿಂದ ವ್ಯಕ್ತಿಯ ಬದಲಾವಣೆ ಆರೋಗ್ಯ ರಕ್ಷಣೆ ದೇಹ ರಕ್ಷಣೆ ಲಾಭಗಳನ್ನು ಸವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕರಾಟೆ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು. ಶಿಕ್ಷಕಿ ರಾಜಮ್ಮ ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಸಚಿವ ಈಶ್ವರ ಖಂಡ್ರೆಯವರಿಂದ ಅಧಿಕೃತ ಘೋಷಣೆ

Suddi Udaya

ಚಾರ್ಮಾಡಿ ಗ್ರಾ.ಪಂ. ಮಟ್ಟದ ಸುಸ್ಥಿರ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳ ತರಬೇತಿ ಕಾರ್ಯಕ್ರಮ, ಭಿತ್ತಿಪತ್ರ ಬಿಡುಗಡೆ

Suddi Udaya

ಬೆಳ್ತಂಗಡಿ ಲಯನ್ಸ್ ಝೋನ್ ಮಟ್ಟದ ಸೆಮಿನಾರ್

Suddi Udaya

ಮಚ್ಚಿನ ಕಾರ್ಯಕ್ಷೇತ್ರದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ

Suddi Udaya

ವಾಣಿ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!