ತೋಟತ್ತಾಡಿ : ಇತಿಹಾಸ ಪ್ರಸಿದ್ಧ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೇ 22 ರಂದು ನಡೆಯುವ 2ನೇ ವರ್ಷದ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆಯು ಎ. 5 ರoದು ದೇವಸ್ಥಾನದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿವಾಕರ ಪೂಜಾರಿ ಕಲೆಂಜೊಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಾತ್ರೋತ್ಸವವನ್ನು ಅದ್ದೂರಿಯಾಗಿ ನಡೆಸುವುದು ಮತ್ತು ರಾತ್ರಿ ಸಸಿಹಿತ್ಲು ಮೇಳದವರಿಂದ ಯಕ್ಷಗಾನ ಬಯಲಾಟವನ್ನು ಆಡಿ ತೋರಿಸುವ ಬಗ್ಗೆ ನಿರ್ಣಯಿಸಲಾಯಿತು. ನಂತರ ಸಭೆಯಲ್ಲಿ ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ, ಅಧ್ಯಕ್ಷರಾಗಿ ಲೋಕಯ್ಯ ಪೂಜಾರಿ ಬರಮೇಲು, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ಗೌಡ ಪಿತ್ತಿಲು, ಉಪಾಧ್ಯಕ್ಷರುಗಳಾಗಿ ಶ್ರೀನಿವಾಸ ಗೌಡ ಕಲ್ಲರಿಗೆ, ಆನಂದ ಪೂಜಾರಿ ಬರಮೇಲು, ಗುರುವಪ್ಪ ಭಂಡಾರಿ ಆಗರಿ, ಆನಂದ ಪೂಜಾರಿ ನೆಲ್ಲಿಗುಡ್ಡೆ, ಶ್ರೀಮತಿ ಚಂದ್ರಾವತಿ ಪರಾರಿ ಶ್ರೀಮತಿ ದಮಯಂತಿ ಕಜೆ ಕೋಶಾಧಿಕಾರಿಯಾಗಿ ಚಂದ್ರಶೇಖರ ಗೌಡ ಪರಾರಿ ಗೌರವ ಸಲಹೆಗಾರರಾಗಿ ದಿವಾಕರ ಪೂಜಾರಿ ಕಲೆಂಜೊಟ್ಟು, ಕುಶಾಲಪ್ಪ ಗೌಡ ಅಗರಿ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಊರವರು ಭಾಗವಹಿಸಿದರು.