September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾಮಗಾರಿ ನಿರ್ವಹಿಸಿದ ಬಿಲ್ಲು ಪಾವತಿಗೆ ಒತ್ತಾಯಿಸಿ ಮಂಗಳೂರಿನಲ್ಲಿ ಬೆಳ್ತಂಗಡಿ ಲೋಕೋಪಯೋಗಿ ಗುತ್ತಿಗೆದಾರರ ಧರಣಿ

ಬೆಳ್ತಂಗಡಿ: ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆದ ಕಾಮಗಾರಿಗಳ ಬಿಲ್ಲನ್ನು ಪಾವತಿಸುವಂತೆ ಒತ್ತಾಯಿಸಿ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಕೆಲ ಗುತ್ತಿಗೆದಾರರು ಅ.29ರಂದು ಮಂಗಳೂರು ಲೋಕೋಪಯೋಗಿ ಕಚೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖೆ ವತಿಯಿಂದ ತಾಲೂಕಿನಾದ್ಯಂತ ಇಲಾಖೆಗೆ ಸೇರಿದ ರಸ್ತೆಗಳ ನಿರ್ವಹಣೆ, ಸೇತುವೆಗಳ ರಚನೆ, ರಸ್ತೆ ಡಾಮರೀಕರಣ, ರಸ್ತೆ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರರು ನಿರ್ವಹಿಸುತ್ತಾರೆ. ಆದರೆ ಇವರಿಗೆ ಕಾಮಗಾರಿ ನಿರ್ವಹಿಸಿದ ಹಣ ಸರಕಾರದಿಂದ ಸರಿಯಾದ ಸಮಯಕ್ಕೆ ಬಿಡುಗಡೆಯಾಗುತ್ತಿಲ್ಲ. ಹಣಕ್ಕಾಗಿ ಅಲೆದಾಟ, ವರ್ಷಗಟ್ಟೆಲೆ ಕಾಯಬೇಕಾಗುತ್ತದೆ. ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಈಗಾಗಲೇ ಮಾಡಿರುವ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಸುಮಾರು ೫೦ ಕೋಟಿಯಷ್ಟು ಅನುದಾನ ಬಿಡುಗಡೆಗೆ ಬಾಕಿಯಾಗಿದೆ.

ಗುತ್ತಿಗೆದಾರರು ಕೆಲಸ ನಿರ್ವಹಿಸಿದರೂ ಸರಕಾರದಿಂದ ಹಣ ಬಿಡುಗಡೆಯಾಗದಿರುವುದರಿಂದ ಗುತ್ತಿಗೆದಾರರು ಬಹಳಷ್ಟು ಸಂಕಷ್ಟವನ್ನು ಅನುಭವಿಸಬೇಕಾಗಿದೆ. ಕೆಲಸವೂ ಇಲ್ಲದೆ, ಹಣವೂ ಬಿಡುಗಡೆಯಾಗದೆ ಜೀವನ ನಿರ್ವಹಣೆಗೆ ಬವಣೆ ಪಡುವ ಸ್ಥಿತಿಯಾಗಿದೆ. ಹಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರೂ, ಇಂದು, ನಾಳೆ ಎಂಬ ಕುಂಟು ನೆಪವನ್ನು ಒಡ್ಡಿ ಗುತ್ತಿಗೆದಾರರನ್ನು ಸಮಾಧಾನ ಪಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆಯೇ ಹೊರತು ಯಾವುದೇ ಫಲ ನೀಡಿಲ್ಲ.
ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ಕೆಲ ಗುತ್ತಿಗೆದಾರರು ಅ.29ರಂದು ಮಂಗಳೂರು ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಧರಣಿ ಸತ್ಯಾಗ್ರಹ ನಡೆಸಿದರು. ಗುತ್ತಿಗೆದಾರರಾದ ರಾಜಶೇಖರ್ ಅಂಡಿಂಜೆ, ಅನಿಲ್ ಬೆಳ್ತಂಗಡಿ, ದಿಶಾಂತ್ ಬೆಳ್ತಂಗಡಿ, ದಯಾನಂದ ಬೆಳ್ತಂಗಡಿ, ಸಹದೇವ್, ಬದ್ರುದ್ದೀನ್, ಸಂಯುಕ್ತ್ ಕಡ್ತಿಲ ಮೊದಲಾದವರು ಕಚೇರಿಯ ಎದುರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ವಿಭಾಗೀಯ ಇಂಜಿನಿಯರ್ ಅಮರನಾಥ್ ಜೈನ್ ಅವರು ಪ್ರತಿಭಟನಾ ನಿರತರೊಡನೆ ಮಾತುಕತೆ ನಡೆಸಿ, ತಾನು ಬೆಳ್ತಂಗಡಿ ಉಪ ವಿಭಾಗಕ್ಕೆ ಭೇಟಿ ನೀಡಿ ಎಲ್ಲಾ ಗುತ್ತಿಗೆದಾರರ ಜೊತೆ ಮಾತುಕತೆ ನಡೆಸುತ್ತೇನೆ. ಈಗಾಗಲೇ ಸಂಬಂಧಿಸಿದ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ. ಒಂದು ತಿಂಗಳ ಒಳಗೆ ಬಾಕಿ ಹಣವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ನಂತರ ಧರಣಿಯನ್ನು ಹಿಂತೆಗೆದುಕೊಳ್ಳಲಾಯಿತು.

Related posts

ಬಂಗಾಡಿ ಬಿಎಸ್ಎನ್ಎಲ್ ನೆಟ್ವರ್ಕ್ಸ್ ಸಮಸ್ಯೆಯಿಂದ ಗ್ರಾಹಕರು ಕಂಗಾಲು: ಸಂಬಂಧ ಪಟ್ಟವರು ನೆಟ್ವರ್ಕ್ಸ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ನೂತನ ಕೊಠಡಿಗೆ ಶಿಲಾನ್ಯಾಸ ಹಾಗೂ ವಿವೇಕ ಕೊಠಡಿ ಉದ್ಘಾಟನೆ

Suddi Udaya

ಸವಣಾಲು : ರಿಕ್ಷಾಗೆ ಬೈಕ್ ಡಿಕ್ಕಿ: ಬೈಕ್‌ ಸವಾರ ಗಂಭೀರ ಗಾಯ

Suddi Udaya

ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ಶಿಕ್ಷಕ-ರಕ್ಷಕ ಸಭೆ

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಗೇರುಕಟ್ಟೆಯ ಅದೀಲ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya

ಚಾರ್ಮಾಡಿಯಲ್ಲಿ ಅಕ್ರಮ ಮರಳು ಸಾಗಾಟ: ಲಾರಿಯನ್ನು ವಶಪಡಿಸಿಕೊಂಡ ಧರ್ಮಸ್ಥಳ ಪೊಲೀಸರು

Suddi Udaya
error: Content is protected !!