April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು : ಮಾಯಾದಲ್ಲಿ ಶ್ರೀ ಕ್ಷೇ.ಧ. ಗ್ರಾ. ಯೋಜನೆ ವತಿಯಿಂದ ನೀರು ಉಳಿಸಿ, ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

ಬೆಳಾಲು : ಜಗವೊಂದಿದ್ದರೆ ಜಗವೆಲ್ಲ ನೆಮ್ಮದಿಯಿಂದಿರುವುದು ಎನ್ನುವ ಹಾಗೆ ನೀರು ಉಳಿಸಿ ಅಭಿಯಾನ ದೊಂದಿಗೆ ಮತ್ತು ಅಳಿವಿನ ಅಂಚಿನಲ್ಲಿರುವ ಪಕ್ಷಿ ಸಂಕುಲವನ್ನು ಉಳಿಸೋಣ ಎನ್ನುವ ಮಾತೃಶ್ರೀ ಹೇಮಾವತಿ ಅಮ್ಮನವರ ಸಂಕಲ್ಪದಂತೆ ಇಂದು(ಎ.7) ಸುಡು ಬೇಸಿಗೆಯಲ್ಲಿ ಬಿರು ಬಿಸಿಲಿನ ಬೇಗೆಯಿಂದ ಅದೆಷ್ಟೋ ಪಕ್ಷಿ ಸಂಕುಲವು ಜೀವ ಜಲದಿಂದ ತತ್ತರಿಸಿ ಹೋಗಿದೆ. ಅವುಗಳಿಗೆ ಜೀವಜಲದ ವ್ಯವಸ್ಥೆ ಮಾಡಬೇಕು ಎಂಬ ಮಾರ್ಗದರ್ಶನದಂತೆ ಉಜಿರೆ ವಲಯದ ಮಾಯಾ ಕಾರ್ಯಕ್ಷೇತ್ರದ ಒಕ್ಕೂಟ ಸಭೆಯಲ್ಲಿ ಸಂಘದ ಸದಸ್ಯರಿಗೆ ತಮ್ಮ ತಮ್ಮ ಮನೆಯಲ್ಲಿ ಸುತ್ತ ಮುತ್ತ ಮಣ್ಣಿನ ಮಡಿಕೆ, ಪಾತ್ರೆ ಗಳಲ್ಲಿ ಜಲದ ವ್ಯವಸ್ಥೆಯನ್ನು ಕಲ್ಪಿಸಿ ಪಕ್ಷಿ ಸಂಕುಲಗಳ ಜೀವ ಉಳಿಸೋಣ ಎನ್ನುವ ಸಂಕಲ್ಪದಂತೆ, ಅತಿ ಹೆಚ್ಚು ನೀರನ್ನು ಹಾಳು ಮಾಡದಂತೆ ಸದಸ್ಯರಿಗೆ ಮಾಹಿತಿ ನೀಡಿ ಪಕ್ಷಿ ಸಂಕುಲಗಳಿಗೆ ಜೀವಜಲದ ವ್ಯವಸ್ಥೆ ಮಾಡಲಾಯಿತು.


ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರಾದ ನವೀನ್, ಮೇಲ್ವಿಚಾರಕರಾದ ಶ್ರೀಮತಿ ವನಿತಾ, ಒಕ್ಕೂಟದ ಅಧ್ಯಕ್ಷರಾದ ಗಂಗಾಧರ್ ಸಾಲ್ಯಾನ್, ಒಕ್ಕೂಟದ ಪದಾಧಿಕಾರಿಗಳು, ಹಿರಿಯ ನವಜೀವನ ಸದಸ್ಯ ಕುಂಭ ಗೌಡ, ಮಾಜಿ ಅಧ್ಯಕ್ಷ ಶಿವಪ್ಪಗೌಡ, ಸೇವಾಪ್ರತಿನಿಧಿ ಪ್ರಭಾವತಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

Suddi Udaya

ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಛದ್ಮವೇಷ ಸ್ಪರ್ಧೆ

Suddi Udaya

ಪೆರಿಂಜೆ ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ಗೇರುಕಟ್ಟೆಯಲ್ಲಿ ವಿಶ್ವ ಅಗ್ನಿಹೋತ್ರ ದಿನದ ಆಚರಣೆ

Suddi Udaya
error: Content is protected !!