39.7 C
ಪುತ್ತೂರು, ಬೆಳ್ತಂಗಡಿ
April 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರ್ನಾಟಕ ಸರಕಾರವು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ರೂ. ಅನುದಾನ ಬಿಡುಗಡೆ ಮತ್ತು ಸರಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದನ್ನು ರದ್ದು ಮಾಡುವ ಕುರಿತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಪ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ

ಬೆಳ್ತಂಗಡಿ : ಕರ್ನಾಟಕ ಸರಕಾರವು ಇತ್ತಿಚೇಗೆ ತನ್ನ ಬಜೆಟ್ ದಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾದ ಅನುದಾನವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮುಸಲ್ಮಾನ ಕಾಲೋನಿಗಳಿಗೆ 1000 ಕೋಟಿ, ಮುಸಲ್ಮಾನ ಇಮಾಮರಿಗೆ ಮಾಸಿಕ 6000 ರೂಪಾಯಿ ವೇತನ, ಮುಸಲ್ಮಾನ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂಪಾಯಿ, ಮುಸಲ್ಮಾನ ವಿದ್ಯಾರ್ಥಿಗಳ ವಿದೇಶೀ ಶಿಷ್ಯವೇತನಕ್ಕೆ 30 ಲಕ್ಷ ರೂ., ಮುಸಲ್ಮಾನ ಹೆಣ್ಣುಮಕ್ಕಳಿಗೆ ಆತ್ಮ ರಕ್ಷಣೆ ತರಬೇತಿ, ವಕ್ಸ್ ಬೋರ್ಡ ಆಸ್ತಿ ರಕ್ಷಣೆಗೆ 150 ಕೋಟಿ ರೂ. ಅನುದಾನ, ಮುಸಲ್ಮಾನರು ಬಹುಸಂಖ್ಯಾತರಿರುವ ಪ್ರದೇಶದಲ್ಲಿ ಐಟಿಐ ಕಾಲೇಜಿಗೆ ಮಂಜೂರಾತಿ, 100 ಉರ್ದುಶಾಲೆಗಳ ಸ್ಥಾಪನೆ, ಮುಸಲ್ಮಾನ ಯುವಕರ ಸ್ಟಾರ್ಟ ಆಪ್ ಗೆ ಸರಕಾರೀ ಸಹಾಯಧನ, ಮುಸಲ್ಮಾನ ಮಕ್ಕಳಿಗೆ ವೃತ್ತಿಪರ ತರಬೇತಿ, ಹಜ್ ಭವನಕ್ಕೆ ಅನುದಾನ. ಹೀಗೆ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನೆಪದಲ್ಲಿ 4500 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಅದಲ್ಲದೆ ಸರಕಾರದ ಟೆಂಡರ್ ಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಮಸೂದೆಯನ್ನು ಸಹ ಮಂಡಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲದಿರುವಾಗಲೂ, ಸರಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಸಂವಿಧಾನಬಾಹಿರ ಮೀಸಲಾತಿಯನ್ನು ನೀಡಿದೆ. ಆದರಿಂದ ಮೀಸಲಾತಿಯನ್ನು ರದ್ದು ಮಾಡುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಪ ತಹಸೀಲ್ದಾರರಾದ ಜಯ ಇವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ತಲುಪಿಸಲಾಯಿತು.

ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ 34 ಸಾವಿರ ಸೀ ಗ್ರೇಡ್ ದೇವಸ್ಥಾನಗಳ ಅರ್ಚಕರಿಗೆ ಯಾವುದೇ ಸಂಬಳ ಇಲ್ಲ. ಆದರೆ ಇಮಾಮ್‌ರಿಗೆ 6 ಸಾವಿರ ರೂಪಾಯಿ ಅನುದಾನ ನೀಡಲಾಗಿದೆ. ಅದಲ್ಲದೇ ಧಾರ್ಮಿಕ ದತ್ತಿ ಇಲಾಖೆಯ ಸೀ ಗ್ರೇಡ್ ನ ಸಾವಿರಾರು ದೇವಸ್ಥಾನಗಳು ಜೀರ್ಣೋದ್ದಾರ, ಸುಣ್ಣ ಬಣ್ಣ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿವೆ. ಆದರೆ ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಯಾವುದೇ ಅನುದಾನವಿಲ್ಲ. ಹೀಗೆ ಸರಕಾರವು ಸಾರ್ವಜನಿಕರ ತೆರಿಗೆ ಹಣವನ್ನು ಕೇವಲ ಒಂದೇ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುವುದು ಭಾರತದ ಸಂವಿಧಾನದ ಕಲಂ 14, 15 ರ ಉಲ್ಲಂಘನೆಯಾಗಿದೆ. ಹಾಗಾಗಿ ಸರಕಾರದ ಈ ವರ್ಷದ ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಧರ್ಮ ಪ್ರೇಮಿಗಳಾದ ನಾರಾಯಣ ಪಡ್ಕೆ ಮುಂಡಾಜೆ, ಜಯ ಸಾಲಿಯಾನ್ ಬಲೆಂಜ, ವಾಮನ್ ಬಾಳಿಗ ವೇಣೂರು, ರಾಘವೇಂದ್ರ ಕಾಮತ್ ಉಜಿರೆ, ಸಂತೋಷ್ ಕುಮಾರ್ ಪೆರಿಯಡ್ಕ, ಕೇಶವ ಅಚ್ಚಿನಡ್ಕ, ಶಿವರಾಮ್ ಉಜಿರೆ, ವಿಜ್ಞೇಶ್ ಆಚಾರ್ಯ ಬೆಳ್ತಂಗಡಿ, ಕೇಶವ ಭಟ್ ಅತ್ತಾಜೆ, ಉಮೇಶ್ ಬಂಗೇರ ಪಿಲ್ಯ, ಶಿವರಾಮ ಉಜಿರೆ, ಯೋಗೀಶ್ ಕೆಂಬರ್ಜಿ, ಕರುಣಾಕರ ಅಬ್ಯಂಕರ ಸೋಮಂತಡ್ಕ, ಹಿಂದೂ ಜನಜಾಗೃತಿ ಸಮಿತಿಯ ಹರೀಶ ಕಕ್ಕಿಂಜೆ ಉಪಸ್ಥಿತರಿದ್ದರು.

Related posts

ವೇಣೂರಿನಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಲು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜ

Suddi Udaya

ಕರಿಮಣೇಲು ಸಂತ ಜೂಡರ ಅ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

Suddi Udaya

ವಿದ್ಯುತ್ ಕಾಮಗಾರಿ ವೇಳೆ ಕಂಬದಿಂದ ಬಿದ್ದು ಮುಗೇರಡ್ಕ ನಿವಾಸಿ ಪ್ರಕಾಶ್ ಮೃತ್ಯು

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮಾ.8: ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಯಿಂದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ, ಶ್ರೀ ಸರ್ವೇಶ್ವರೀ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಶಿಶಿಲ: ತಾಯಿ ಮಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಶ್ರೀ ಮತ್ಸ್ಯ ಶಿವ ದುರ್ಗಾ ಮಹಿಳಾ ಭಜನಾ ಮಂಡಳಿಯಿಂದ ಸರಕಾರಕ್ಕೆ ಮನವಿ

Suddi Udaya
error: Content is protected !!