ಅರಸಿನಮಕ್ಕಿ: ಕುಂಟಾಲಪಳಿಕೆ ಅಂಗನವಾಡಿ ಕೇಂದ್ರದ ವಾರ್ಷಿಕ ಸಂಭ್ರಮದ ಪ್ರಯುಕ್ತ ಅಂಗನವಾಡಿ ಪುಟಾಣಿಗಳಿಂದ ಮಕ್ಕಳ ಹಬ್ಬವನ್ನು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನುಕುಂಟಾಲಪಳಿಕೆ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಕುಶಾಲಾಕ್ಷಿ ದೀಪಬೆಳಗಿಸಿ ಮಕ್ಕಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸತ್ಯಪ್ರಭಾ ಎಸ್, ಪೋಷಕರು ವಿದ್ಯಾ ದುಗ್ಗಪ್ಪ ಗೌಡ, ಬಾಲವಿಕಾಶ ಸದಸ್ಯ ಗಿರಿಧರ , ಆಶಾಕಾರ್ಯಕರ್ತೆ ಶ್ರೀಮತಿ ಕವಿತಾ , ಹಿರಿಯ ಪೋಷಕರು ಶ್ರೀಮತಿ ಇಂದಿರಾ ಉಪಸ್ಥಿತರಿದ್ದರು.
ಪುಟಾಣಿ ಮಕ್ಕಳು ಪ್ರಾರ್ಥನೆ ಹಾಡಿದರು. ಶ್ರೀಮತಿ ಜಯಶ್ರೀ ಸ್ವಾಗತಿಸಿ, ಶ್ರೀಮತಿ ಸತ್ಯಪ್ರಭಾ ಎಸ್ ಧನ್ಯವಾದವಿತ್ತರು. ಶ್ರೀಮತಿ ವಿಮಲ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಧರ್ಮರಾಜ ಗೌಡ ಅಡ್ಕಾಡಿ ಹಾಗೂ ಗಿರಿಧರ ರವರು ಸಿಹಿ ತಿಂಡಿ ವ್ಯವಸ್ಥೆಯನ್ನು ಮಾಡಿದರು.