September 6, 2026
Uncategorized

ಕುತ್ಲೂರಿನಲ್ಲಿ ಗೂಡ್ಸ್ ವಾಹನ ರಿಕ್ಷಾಕ್ಕೆ ಡಿಕ್ಕಿ: ಪ್ರಯಾಣಿಕ ರಾಜೇಂದ್ರ ಆಳ್ವಾರಿಗೆ ಗಾಯ

ಕುತ್ಲೂರು : ಇಲ್ಲಿನ ಕುತ್ಲೂರು ಎಂಬಲ್ಲಿ ಗುರುವಾಯನಕೆರೆ – ನಾರಾವಿ ರಾಜ್ಯ ಹೆದ್ದಾರಿಯಲ್ಲಿ ನಾರಾವಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಗಾಯಗೊಂಡು ಮೂಡುಬಿದಿರೆ ಆಸ್ಪತ್ರೆಗೆ ದಾಖಲಾದ ಘಟನೆ ಎ. 10ರಂದು ನಡೆದಿದೆ.

ಗೂಡ್ಸ್ ವಾಹನದ ಚಾಲಕರಾದ ಶಶಿಧರ ದೇವಾಡಿಗ ಎಂಬವರು ದುಡುಕುತನದಿಂದ ಬೇರೆ ವಾಹನಗಳನ್ನು ಓವರ ಟೇಕ್‌ ಮಾಡಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಗುರುವಾಯನಕೆರೆ ಕಡೆಯಿಂದ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ, ರಾಜೇಂದ್ರ ಆಳ್ವಾ ರವರಿಗೆ ಗಾಯ ಉಂಟಾಗಿದ್ದಲ್ಲದೇ ಎರಡು ವಾಹನಗಳು ಜಖಂ ಗೊಂಡಿದೆ. ಗಾಯಾಳು ರಾಜೇಂದ್ರ ಆಳ್ವಾರವರು ಮೂಡಬಿದ್ರೆ ಆಳ್ವಾಸ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಚಾರ್ಮಾಡಿ : ಬಂಟ್ವಾಳ ಗ್ರಾಮದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಯುವಸಿರಿ ರೈತ ಭಾರತದ ಐಸಿರಿ ಕಲ್ಪನೆಯಂತೆ 2000ಕ್ಕೂ ಮಿಕ್ಕಿ ಯುವ ಜನತೆಯಿಂದ ಏಕಕಾಲದಲ್ಲಿ ಭತ್ತದ ಕೃಷಿಯ ಕಟಾವು ಕಾರ್ಯಕ್ರಮ

Suddi Udaya

ಜನಸ್ಪಂದನ ಸಭೆಗೆ ಸ್ಪಂದನೆ ನೀಡದ ಬಾರ್ಯ ಗ್ರಾಮ ಪಂಚಾಯತ್ ಆಡಳಿತ: ಪಿಡಿಒ ವಿರುದ್ಧ ಶಾಸಕರು ಗರಂ

Suddi Udaya

ಭಾರತ್ ಬ್ಯಾಂಕ್‌ ಮುಂಬೈ ಇದರ ಬೆಳ್ತಂಗಡಿ ಕಛೇರಿ ಶುಭಾರಂಭ: ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ, ಶಾಸಕ ಹರೀಶ್ ಪೂಂಜ,ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಉಪಸ್ಥಿತಿ

Suddi Udaya

ಸುಲ್ಕೇರಿ: ಬೀಡಿ ಗುತ್ತಿಗೆದಾರ ಆನಂದ ಪೂಜಾರಿ ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಲೇಡಿ ಜೇಸಿ ಮತ್ತು ಜೆಜೆಸಿ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!